BREAKING: ಹುಬ್ಬಳ್ಳಿಯ ಈದ್ದಾ ಮೈದಾನ ಇನ್ಮುಂದೆ ‘ರಾಣಿ ಚೆನ್ನಮ್ಮ ಮೈದಾನ’: ಪಾಲಿಕೆಯಿಂದ ಅಧಿಕೃತ ಘೋಷಣೆ

Picture of Savistara

Savistara

Bureau Report

ಹುಬ್ಬಳ್ಳಿ: ಪ್ರತಿ ವರ್ಷವೂ ಗಣೇಶೋತ್ಸವದ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗುತ್ತಿದ್ದಂತ ಹುಬ್ಬಳ್ಳಿಯ ಈದ್ದಾ ಮೈದಾನವನ್ನು ರಾಣಿ ಚೆನ್ನಮ್ಮ ಗೌಂಡ್ ಎಂಬುದಾಗಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಉಪ ಮೇಯ‌ರ್ ಸಂತೋಷ್ ಚೌಹ್ವಾಣ್ ಅಧಿಕೃತವಾಗಿ ಘೋಷಿಸಿದ್ದಾರೆ.ಪ್ರತಿ ವರ್ಷ ಗಣೇಶ ಹಬ್ಬ ಪ್ರಾರಂಭವಾಗುತ್ತಿದ್ದಂತೇ, ಹುಬ್ಬಳ್ಳಿಯ ಈದ್ದಾ ಮೈದಾನ ವಿವಾದಕ್ಕೆ ಕಾರಣವಾಗುತ್ತಿತ್ತು.

ಗಣೇಶೋತ್ಸವ ಕೂರಿಸುವ ಸಂಬಂಧ ವಿವಾದ ತೀರ್ವಗೊಳ್ಳುತ್ತಿತ್ತು. ಇದಕ್ಕೆ ಕಾರಣ ಈದ್ದಾ ಮೈದಾನ ಎಂಬುದಾಗಿ ಹೆಸರಿದ್ದದ್ದೇ ಆಗಿತ್ತು.ಆದರೇ ಈ ಬಾರಿ ಗಣೇಶೋತ್ಸವ ಈದ್ದಾ ಮೈದಾನದಲ್ಲಿ ಶಾಂತಿಯುತವಾಗಿಯೇ ನಡೆಯುತ್ತಿದೆ. ಈ ಗಣೇಶೋತ್ಸವದ ಸಂದರ್ಭದಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಈದ್ದಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.ಈಗಾಗಲೇ ಈ ಬಗ್ಗೆ ಹುಬ್ಬಳ್ಳಿ ಮಹಾನಗರ ಪಾಲೀಕೆಯಿಂದ ಠರಾವು ಪಾಸ್ ಮಾಡಲಾಗಿದೆ. ಈ ಬಳಿಕ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಹೆಸರಿಟ್ಟಿರೋದಕ್ಕೆ ಹಿಂದೂಪರ ಸಂಘಟನೆಗಳ, ಗಜಾನನ ಉತ್ಸವ ಸಮಿತಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

[t4b-ticker]
error: Content is protected !!