BCCI ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ರೋಜರ್ ಬಿನ್ನಿ; ರಾಜೀವ್ ಶುಕ್ಲಾಗೆ ಚುಕ್ಕಾಣಿ

Picture of Savistara

Savistara

Bureau Report

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ರೋಜರ್ ಬಿನ್ನಿ ಕೆಳಗಿಳಿಯಲಿದ್ದು, ರಾಜೀವ್ ಶುಕ್ಲಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೀವ್ ಶುಕ್ಲಾ ಮುಂದಿನ ಚುನಾವಣೆಯವರೆಗೂ ಆ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬುಧವಾರ ಶುಕ್ಲಾ ನೇತೃತ್ವದಲ್ಲಿ ನಡೆದ ಬಿಸಿಸಿಐನ ಸುಪ್ರೀಂ ಕೌನ್ಸಿಲ್ ಸಭೆಯಲ್ಲಿ ಡ್ರೀಮ್ 11ರ ಪ್ರಾಯೋಜಕತ್ವ ಒಪ್ಪಂದವನ್ನು ರದ್ದುಗೊಳಿಸುವುದು ಮತ್ತು ಮುಂದಿನ ಅವಧಿಗೆ ಹೊಸ ಪ್ರಾಯೋಜಕರನ್ನು ಹುಡುಕುವ ಬಗ್ಗೆ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಏಷ್ಯಾ ಕಪ್ ಸೆಪ್ಟೆಂಬರ್ 10ರಂದು ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಹೊಸ ಪ್ರಾಯೋಜಕರನ್ನು ಹುಡುಕುವುದು ಬಿಸಿಸಿಐಗೆ ಕಠಿಣ ಸವಾಲಾಗಿದೆ.

ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಕಾನೂನಿನ ಅಧಿಸೂಚನೆ ಇನ್ನೂ ಹೊರಬಿದ್ದಲ್ಲ. ಆದರೆ, ಬಿಸಿಸಿಐ ಮುಂದಿನ ತಿಂಗಳು ತನ್ನ ವಾರ್ಷಿಕ ಮಹಾಸಭೆ ಮತ್ತು ಚುನಾವಣೆಗಳನ್ನು ನಡೆಸಬೇಕಾಗುತ್ತದೆ. ಮೂಲಗಳ ಪ್ರಕಾರ, ಕಾನೂನು ಔಪಚಾರಿಕವಾಗಿ ಜಾರಿಗೆ ಬರಲು ನಾಲ್ಕು ಅಥವಾ ಐದು ತಿಂಗಳುಗಳು ಬೇಕಾಗುತ್ತವೆ. ಹೀಗಾಗಿ, ಚುನಾವಣೆಗಳನ್ನು ಮುಂದೂಡಲಾಗುವುದಿಲ್ಲ ಎಂದು ತಿಳಿದು ಬಂದಿದೆ.ಪ್ರಸ್ತುತ, ಲೋಧಾ ಸಮಿತಿಯ ಶಿಫಾರಸುಗಳ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಸಂವಿಧಾನದ ಅಡಿಯಲ್ಲಿ ಬಿಸಿಸಿಐ ಕಾರ್ಯನಿರ್ವಹಿಸುತ್ತಿದೆ. ಹೊಸ ಕ್ರೀಡಾ ಕಾನೂನು ಜಾರಿಗೆ ಬರುವವರೆಗೆ, ಬಿಸಿಸಿಐ ಮತ್ತು ಅದರ ರಾಜ್ಯ ಸಂಘಗಳು ಎರಡೂ ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇತ್ತೀಚೆಗೆ, ಮುಂದಿನ ಸೂಚನೆ ಬರುವವರೆಗೆ ಚುನಾವಣೆಗಳು ಪ್ರಸ್ತುತ ಸಂವಿಧಾನದ ಅಡಿಯಲ್ಲಿ ನಡೆಯಲಿವೆ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.

ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯೊಂದಿಗೆ, ಬಿಸಿಸಿಐ ಪದಾಧಿಕಾರಿಗಳ ವಯಸ್ಸಿನ ಮಿತಿಯನ್ನು 70 ವರ್ಷಗಳಿಂದ 75 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ. ಹೀಗಾಗಿ, ಈಗ 70 ವರ್ಷ ವಯಸ್ಸಿನ ಬಿನ್ನಿ, ಹುದ್ದೆಯನ್ನು ಅಲಂಕರಿಸಲು ಅನುಮತಿಸಲಾದ ವಯಸ್ಸಿನ ಮಿತಿಯ ಅಡಿಯಲ್ಲಿ ಬರುವುದರಿಂದ ಬಿಸಿಸಿಐನ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಹುದು.

ರಾಷ್ಟ್ರೀಯ ಕ್ರೀಡಾ ಆಡಳಿತ ಕಾನೂನಿನ ಕುರಿತು..: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ರಾಷ್ಟ್ರೀಯ ಕ್ರೀಡಾ ಆಡಳಿತ ಕಾನೂನು, ರಾಷ್ಟ್ರೀಯ ಕ್ರೀಡಾಸಂಸ್ಥೆಗಳಿಗೆ ಮಾನ್ಯತೆ ನೀಡುವ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಗುರಿ ಹೊಂದಿದೆ.ಈ ಕಾಯ್ದೆಯು ಪ್ರತಿಯೊಂದು ಕ್ರೀಡೆಗೂ ರಾಷ್ಟ್ರೀಯ ಒಲಿಂಪಿಕ್ ಸಮಿತಿ, ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕ ಕ್ರೀಡಾ ಒಕ್ಕೂಟಗಳ ಸ್ಥಾಪನೆಯನ್ನು ಬಲಪಡಿಸುತ್ತದೆ.ರಾಷ್ಟ್ರೀಯ ಸಂಸ್ಥೆಗಳು ಆಯಾ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಪ್ರತಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ಸಾಮಾನ್ಯ ಮಂಡಳಿಯನ್ನು ಹೊಂದಿರಬೇಕು, ಪ್ರತಿ ಅಂಗಸಂಸ್ಥೆ ಸಮಾನ ಸಂಖ್ಯೆಯ ಪ್ರತಿನಿಧಿಗಳು ಮತ್ತು ಕೆಲವು ಪದನಿಮಿತ್ತ ಸದಸ್ಯರು ಇರಬೇಕೆಂದು ಕಾಯ್ದೆ ಶಿಫಾರಸು ಮಾಡುತ್ತದೆ.ಕಾರ್ಯಕಾರಿ ಸಮಿತಿ ಕನಿಷ್ಠ ಇಬ್ಬರು ಅತ್ಯುತ್ತಮ ಕ್ರೀಡಾಪಟುಗಳು ಮತ್ತು ನಾಲ್ವರು ಮಹಿಳೆಯರನ್ನು ಒಳಗೊಂಡ 15 ಸದಸ್ಯರನ್ನು ಒಳಗೊಂಡಿರುತ್ತದೆ. 1983ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದ ಬಿನ್ನಿ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು.

[t4b-ticker]
error: Content is protected !!