ಬಾಗಿಲು ಮುಚ್ಚುತ್ತಿರುವ ಶಿಲ್ಪಾ ಶೆಟ್ಟಿ ಸಹ ಮಾಲೀಕತ್ವದ ಬಾಸ್ಟಿಯನ್ ರೆಸ್ಟೋರೆಂಟ್

Picture of Savistara

Savistara

Bureau Report

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ₹60 ಕೋಟಿ ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೆ, ಸಹ ಮಾಲೀಕತ್ವದಲ್ಲಿರುವ ಮುಂಬೈನ ಜನಪ್ರಿಯ ‘ಬಾಸ್ಟಿಯನ್ ಬಾಂದ್ರಾ’ ರೆಸ್ಟೋರೆಂಟ್ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಎಂದು ಶಿಲ್ಪಾ ತಿಳಿಸಿದ್ದಾರೆ.

ಸೆ.4ರಿಂದ ರೆಸ್ಟೋರೆಂಟ್ ಕಾರ್ಯಾಚರಣೆ ನಿಲ್ಲಿಸುತ್ತಿದೆ, ಈ ರೆಸ್ಟೋರೆಂಟ್ ಹಲವರ ಮೆಚ್ಚಿನ ಜಾಗವಾಗಿತ್ತು ಎಂದು ಶಿಲ್ಪಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ, ‘ಈ ಗುರುವಾರ ಮುಂಬೈನ ಜನಪ್ರಿಯ ರೆಸ್ಟೋರೆಂಟ್ ‘ಬಾಸ್ಟಿಯನ್ ಬಾಂದ್ರಾ’ದ ಯುಗ ಅಂತ್ಯವಾಗುತ್ತಿದೆ. ಈ ಜಾಗ ಹಲವು ನೆನಪುಗಳಿಗೆ, ಮರೆಯಲಾಗದ ರಾತ್ರಿಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ನಮ್ಮ ನಿಕಟವರ್ತಿಗಳಿಗೆ ಅದ್ಭುತ ಸಂಜೆಯನ್ನು ಆಯೋಜಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.2016ರಲ್ಲಿ ಈ ರೆಸ್ಟೋರೆಂಟ್ ಆರಂಭವಾಗಿತ್ತು. ರಂಜಿತ್ ಬಾಂದ್ರಾ ಮಾಲೀಕತ್ವದ ರೆಸ್ಟೋರೆಂಟ್‌ಗೆ ಶಿಲ್ಪಾ ಶೆಟ್ಟಿ ಸಹ ಮಾಲೀಕರಾಗಿದ್ದರು.

ಈ ಹಿಂದೆ ಬೆಸ್ಟ್ ಡೀಲ್ ಟಿವಿ ಕಂಪನಿಗೆ ಸಂಬಂಧಿಸಿದಂತೆ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ, ಜುಹು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ರಾಜ್ ಕುಂದ್ರಾ ವಿರುದ್ದ ₹60 ಕೋಟಿ ಸಾಲ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಆರೋಪವನ್ನು ದಂಪತಿ ಅಲ್ಲಗೆಳೆದಿದ್ದಾರೆ. ಜತೆಗೆ ಬಹಳ ಹಿಂದೆ ನಡೆದ ವ್ಯವಹಾರವಿದು. ಕಂಪನಿಯು ಆರ್ಥಿಕ ಸಂಕಷ್ಟ ಎದುರಿಸಿತ್ತು ಮತ್ತು ದೀರ್ಘಕಾಲದ ಕಾನೂನು ಸಂಘರ್ಷ ಎದುರಿಸುತ್ತಿತ್ತು’ ಎಂದು ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆಈ ನಡುವೆ ಶಿಲ್ಪಾ ಶೆಟ್ಟಿ ದಂಪತಿಯ ಪ್ರತಿಷ್ಠೆಯಾಗಿದ್ದ ಬಾಸ್ಟಿಯನ್ ರೆಸ್ಟೋರೆಂಟ್‌ಗೆ ಬೀಗ ಬಿದ್ದಿದೆ.

[t4b-ticker]
error: Content is protected !!