ಜಿಎಸ್‌ಟಿ ಕಡಿತ |ದಸರಾ ಉಡುಗೊರೆ: ಹೊಸ ತೆರಿಗೆ ದರಗಳು ಸೆ.22ರಿಂದ ಜಾರಿಗೆ

Picture of Savistara

Savistara

Bureau Report

ನವದೆಹಲಿ: ಸೆ.22ರಿಂದ ನೂತನ ಜಿಎಸ್‌ಟಿ ದರ ಜಾರಿಗೆ ಬರಲಿದೆ. 4ರ ಬದಲು ಶೇ. 5 ಮತ್ತು ಶೇ. 18ರ ಎರಡು ತೆರಿಗೆ ಫ್ಲ್ಯಾಬ್ ದರಗಳಿಗೆ ಜಿಎಸ್‌ಟಿ ಮಂಡಳಿ ಅನುಮೋದನೆ ನೀಡಿದೆ. ಇಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ 5% ಮತ್ತು 18%ರ ತೆರಿಗೆ ಫ್ಲ್ಯಾಬ್‌ಗಳನ್ನು ಎರಡಕ್ಕೆ ಕಡಿತಗೊಳಿಸುವುದಾಗಿ ಘೋಷಿಸಿದೆ ಎಂದು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಪರಿಷ್ಕೃತ ಜಿ ರಚನೆಯು ಸೆ. 22ರಿಂದ ಜಾರಿಗೆ ಬರಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 56ನೇ ಸಭೆಯು ಈ ನಿರ್ಧಾರ ತೆಗೆದುಕೊಂಡಿದೆ. ಅಸ್ತಿತ್ವದಲ್ಲಿರುವ ಶೇ. 12 ಮತ್ತು ಶೇ. 28ರ ಫ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಇನ್ಮುಂದೆ ಶೇ. 5 ಮತ್ತು ಶೇ. 18ರ ಸ್ಟ್ಯಾಬ್ ದರಗಳು ಮಾತ್ರ ಜಾರಿಯಲ್ಲಿರಲಿವೆ.ಆರೋಗ್ಯ, ಜೀವವಿಮೆ ಮೇಲಿನ ಜಿಎಸ್‌ಟಿಯನ್ನು ಸಹ ರದ್ದುಪಡಿಸಲಾಗಿದೆ. ಜಿಒಎಂನ ಎಲ್ಲಾ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿಯು ಅನುಮೋದಿಸಿದೆ. ಎಲ್ಲಾ ರಾಜ್ಯಗಳು ಈ ಪ್ರಸ್ತಾವನೆಗಳಿಗೆ ಸರ್ವಾನುಮತದಿಂದ ಒಪ್ಪಿಕೊಂಡಿವೆ. ಈ ಮೂಲಕ ದೇಶದ ಜನರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಈ ಮೂಲಕ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ದರ ಕಡಿತವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

[t4b-ticker]
error: Content is protected !!