ದೋಹಾದಲ್ಲಿದ್ದ ಹಮಾಸ್ ಮುಖಂಡರ ಮೇಲೆ ಇಸ್ರೇಲ್ ದಾಳಿ

Picture of Savistara

Savistara

Bureau Report

ದೋಹಾ: ಕತಾ‌ರ್ ರಾಜಧಾನಿ ದೋಹಾದಲ್ಲಿ ನೆಲಸಿರುವ ಹಮಾಸ್ ಸಂಘಟನೆಯ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.

ಕತಾ‌ರ್ ಸೇರಿದಂತೆ ಹಲವು ದೇಶಗಳು ಇಸ್ರೇಲ್ ದಾಳಿಯನ್ನು ಖಂಡಿಸಿವೆ. ಹಮಾಸ್‌ನ ರಾಜಕೀಯ ನಾಯಕರ ನಿವಾಸಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಕತಾರ್ ಹೇಳಿದೆ. ದಾಳಿಯ ಗುರಿ ಈಡೇರಿದೆಯೇ ಎಂಬ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ನೀಡಿಲ್ಲ.ಐವರು ಸದಸ್ಯರ ಸಾವು: ದೋಹಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ತನ್ನ ಐದು ಸದಸ್ಯರು ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಇದರಲ್ಲಿ ಹಮಾಸ್ ನಾಯಕ ಖಲೀಲ್ ಅಲ್‌-ಹಯ್ಯಾ ಅವರ ಮಗನೂ ಸೇರಿದ್ದಾರೆ.ಆದರೆ ಕದಾನ ವಿರಾಮ ಮಾತುಕತೆ ನಡೆಸಲು ತಾನು ನಿಯೋಜಿಸಿರುವ ತಂಡದ ಸದಸ್ಯರನ್ನು ಹತ್ಯೆ ಮಾಡುವ ಇಸ್ರೇಲ್‌ ಪ್ರಯತ್ನ ವಿಫಲವಾಗಿದೆ ಎಂದಿದೆ.

Advertisement

ಕತಾರ್‌ನಲ್ಲಿ ಆಶ್ರಯ ಪಡೆದಿರುವ ಹಮಾಸ್ ಸಂಘಟನೆಯ ಉನ್ನತ ನಾಯಕರಲ್ಲಿ ಪ್ರಮುಖ ಸಂಧಾನಕಾರ ಖಲೀಲ್ ಅಲ್-ಹಯ್ಯಾ ಮತ್ತು ರಾಜಕೀಯ ಬ್ಯೂರೊ ಮುಖ್ಯಸ್ಥ ಖಾಲಿದ್ ಮೆಶಾಲ್ ಸೇರಿದ್ದಾರೆ.ಕತಾರ್‌ನಲ್ಲಿ ಕಾರ್ಯಾಚರಣೆ ನಡೆಸುವ ಬಗ್ಗೆ ಇಸ್ರೇಲ್‌ ತನಗೆ ಮುಂಚಿತವಾಗಿ ಮಾಹಿತಿ ನೀಡಿತ್ತು ಎಂದು ಅಮೆರಿಕ ಹೇಳಿದೆ.ಜೆರುಸಲೇಂನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲು ಸೇನೆಗೆ ಆದೇಶಿಸಿದ್ದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಜೆರುಸಲೇಂನಲ್ಲಿ ಬಂದೂಕುಧಾರಿಯೊಬ್ಬ ಆರು ಮಂದಿಯನ್ನು ಹತ್ಯೆಗೈದಿದ್ದ. ದಾಳಿಯ ಹೊಣೆಯನ್ನು ಹಮಾಸ್ ಹೊತ್ತುಕೊಂಡಿತ್ತು.

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!