ಸುಳ್ಯದಲ್ಲಿ ಅದ್ದೂರಿಯಾಗಿ ನಡೆದ ವೀರರಾಣಿ ಅಬ್ಬಕ್ಕ ರಥಯಾತ್ರೆ,ಪಂಜಿನ ಮೆರವಣಿಗೆ | ವೀರ ರಾಣಿ ಅಬ್ಬಕ್ಕ ಸಾಹಸ, ಹೋರಾಟವನ್ನು ಸಮಾಜಕ್ಕೆ ತಿಳಿಸುವ ಅಗತ್ಯವಿದೆ ಕೇಶವ ಬಂಗೇರ

Picture of Savistara

Savistara

Bureau Report

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಅಂಗವಾಗಿ ರಾಣಿ ಅಬ್ಬಕ್ಕ ರಥ ಯಾತ್ರೆಗೆ ಸುಳ್ಯದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ಗಾಂಧಿನಗರದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಬ್ಬಕ್ಕ ರಥ ಯಾತ್ರೆಗೆ ಪುಷ್ಪರ್ಚನೆ ಸಲ್ಲಿಸಿ ಪಂಜಿನ ಮೆರವಣಿಗೆ ಚಾಲನೇ ನೀಡಿದರು.

ನೂರಾರು ಕಾರ್ಯಕರ್ತರು, ಪ್ರಮುಖರು ಪಂಜಿನ ಮೆರವಣಿಗೆ ಯಲ್ಲಿ ಸಾಗಿ ಜ್ಯೋತಿ ವೃತ್ತ ಬಳಿ ಸಂಪನ್ನಗೊಂಡಿತ್ತು. ಸಭಾ ಕಾರ್ಯಕ್ರಮದಲ್ಲಿ ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಪ್ರಸ್ತಾವಿಕವಾಗಿ ಮಾತನಾಡಿ ಅಬ್ಬಕ್ಕ ರಾಣಿ ಯ ಸಾಹಸ ಮತ್ತು ದೇಶ ಭಕ್ತಿಯ ಕಿಚ್ಚನ್ನು ಸಮಾಜದ ಬಳಿ ಮತ್ತೇ ನೆನಪು ಮಾಡಿಕೊಳ್ಳುವ ಉದ್ದೇಶದಿಂದ 500ನೇ ಜಯಂತಿ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.

ರಥಯಾತ್ರ ಪ್ರಮುಖ, ಎಬಿವಿಪಿ ಪ್ರಮುಖರಾದ ಕೇಶವ ಬಂಗೇರ ಮಾತನಾಡಿ ಈ ಕರಾವಳಿ ಯ ಮಣ್ಣಿ ನಲ್ಲಿ ಹೋರಾಟದ ಗುಣವಿದೆ ಅಮರ ಸುಳ್ಯದ ಮೂಲಕ ರಾಮಯ್ಯ ಗೌಡರು ಹೀಗೆ ಅನೇಕರು ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದ್ದಾರೆ ಆದರೆ ರಾಣಿ ಅಬ್ಬಕ್ಕ ಮಹಿಳೆಯಾಗಿ 1595 ರಿಂದ 1640 ವರೆಗೆ ಆಳ್ವಿಕೆ ನಡೆಸಿ ಪೋರ್ಚುಗಿಸರ ಕಪ್ಪ ಕಾಣಿಕೆ ಜಗ್ಗದೆ ನಿರಂತರವಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ ರಾಣಿ ಅಬ್ಬಕ್ಕ, ಒಬ್ಬ ಮಹಿಳೆಯಾಗಿ ದಿಟ್ಟತನದಿಂದ ಹೋರಾಟ ನಡೆಸಿದ್ದರು ಇಂತಹ ಹೋರಾಟವನ್ನು ಆಧುನಿಕ ಪೀಳಿಗೆಯ ಯುವ ಸಮುದಾಯಕ್ಕೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಯೆಂದು ಕೇಶವ ಬಂಗೇರ ತಿಳಿಸಿದರು. ಕಾರ್ಯಕ್ರಮ ದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಸಂಘಟನೆ ಪ್ರಮುಖರಾದ ಪ್ರದುಮ್ನ ಉಬರಡ್ಕ, ಮನೋಜ್ ಅಡ್ಡಂತಡ್ಕ,ಪಿಕೆ ಉಮೇಶ್, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಕುಸುಮಧಾರ ಎ.ಟಿ, ಪ್ರದೀಪ್ ರೈ, ಕಿಶನ್ ಜಬಳೆ,ಜಗದೀಶ್, ಅವಿನಾಶ್ ಕುರುಂಜಿ, ಅನೂಪ್ ಬಿಳಿಮಲೆ,ಸಂದೀಪ್ ವಳಲಂಬೆ, ಹೇಮಂತ್ ಮಠ, ರಜತ್ ಅಡ್ಕಾರು, ಹೇಮಂತ್ ಕಾಮತ್, ಶ್ರೀಕಾಂತ್ ಮಾವಿನಕಟ್ಟೆ, ಸೋಮನಾಥ ಪೂಜಾರಿ, ಎಬಿವಿಪಿ ನಂದನ್ ಮತ್ತು ಪರಿವಾರ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

[t4b-ticker]
error: Content is protected !!