ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಶಿವಮೊಗ್ಗ ಬಿಜೆಪಿ ಪಕ್ಷದ ವತಿಯಿಂದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಳಯದಲ್ಲಿ ವಿಶೇಷ ಪೂಜೆ

Picture of Savistara

Savistara

Bureau Report

ವಿಶ್ವ ನಾಯಕ ನಮ್ಮ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಜೀ ಅವರ 75ನೇ ವರ್ಷದ ಜನ್ಮ ದಿನಾಚರಣೆಯ ನಿಮಿತ್ತ ಬಿಜೆಪಿ ಶಿವಮೊಗ್ಗ ವತಿಯಿಂದ ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಪೂಜೆಯಲ್ಲಿ ಅತ್ಯಂತ ಸಂತಸದಿಂದ ಪಾಲ್ಗೊಳ್ಳಲಾಯಿತು.

ಸ್ವಾತಂತ್ರ್ಯ ಭಾರತ ಕಂಡ ಅಪ್ರತಿಮ ದಿಗ್ಗಜ ನಾಯಕ, ಭಾರತೀಯ ಜನತಾ ಪಕ್ಷದ ಕೋಟ್ಯಾಂತರ ಕಾರ್ಯಕರ್ತರ ಹೆಮ್ಮೆಯ ಸ್ಪೂರ್ತಿಯ ಚಿಲುಮೆ, ಭಾರತ ದೇಶದ ಸನಾತನ ಹಿಂದೂ ಪರಂಪರೆಯ ಸಂಸ್ಕೃತಿ – ಸಾಂಪ್ರದಾಯ – ಆಚರಣೆಯ ಜಾಗತಿಕ ಮಟ್ಟದ ರಾಯಭಾರಿಗಳಾಗಿ ವಿಶ್ವವನ್ನೇ ತನ್ನತ್ತ ಸೆಳೆದ ಮಹಾನ್ ನಾಯಕರು ನಮ್ಮ ಪ್ರಧಾನಿಗಳು.

ಭಾರತದ ಪ್ರತಿಯೊಂದು ರಂಗಗಳ ನೈಜ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಅಗ್ರಗಣ್ಯ ಚಾಣಾಕ್ಷ, ತನ್ನ ಅಪ್ರತಿಮ ರಾಜನೀತಿಯ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿ ವಿಶ್ವಗುರು ಸ್ಥಾನ ಅಲಂಕರಿಸಲು ಶ್ರಮಿಸಿದ ಮಹಾನ್ ಚೇತನ ನಮ್ಮ ಪ್ರಧಾನಿಗಳು.

ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತ ಸಾವಿರಾರು ಜನಪರ ಕಾಳಜಿಯ ನೂತನ ವಿನೂತನ ಯೋಜನೆಗಳನ್ನು ಜಾರಿಗೆ ತಂದು ಇತಿಹಾಸ ಪುಟಗಳಲ್ಲಿ ಮೇಳೈಸಲು ಅವಿರತ ಶ್ರಮಿಸುತ್ತಿರುವ ಮಹಾನ್ ಸಂತ.

ನಿಮ್ಮ ಈ ಮೂರನೇ ಅವಧಿಯಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಬಲವಾಗಲಿ, ದೇಶದ ಬಗೆಗಿನ ನಿಮ್ಮ ಪ್ರತಿಯೊಂದು ಅಶೋತ್ತರಗಳು ಪರಿಪೂರ್ಣವಾಗಲಿ,

ಜನ ಸಾಮಾನ್ಯರೆಡೆಗಿನ ನಿಮ್ಮ ತುಡಿತಕ್ಕೆ ಭಗವಂತ ಮತ್ತಷ್ಟು ಅಗಾಧವಾದ ಶಕ್ತಿ ತುಂಬಲಿ, ದೇಶದ ಅಭ್ಯುದಯಕ್ಕಾಗಿ ಸಮಯದ ಎಲ್ಲೆ ಮೀರಿ ನಿಸ್ವಾರ್ಥ ಸೇವೆಯ ಮೂಲಕ ಶ್ರಮಿಸುತ್ತಿರುವ ನಿಮಗೆ ಮಗದಷ್ಟು ಜನಪರ ಕೆಲಸ ಮಾಡಲು ತಾಯಿ ಭಾರತಾಂಬೆ ಶಕ್ತಿ ನೀಡಿ ಆಯುಷ್ಯ ನೀಡಿ ಹರಸಲಿ ಎಂದು ವಿಶೇಷವಾಗಿ ನಾನು ಪ್ರಾರ್ಥಿಸುತ್ತೇನೆ.

[t4b-ticker]
error: Content is protected !!