ಜಾತಿಗಣತಿ ಕಾಲಂನಲ್ಲಿ ಒಕ್ಕಲಿಗರು ಏನೆಂದು ಬರೆಸಬೇಕು? ಸಭೆಯಲ್ಲಿ ಸ್ವಾಮೀಜಿಗಳಿಂದ ಪ್ರಮುಖ ನಿರ್ಧಾರ

Picture of Savistara

Savistara

Bureau Report

ಬೆಂಗಳೂರು (ಸೆ.20): ಅಪಸ್ವರಗಳ ನಡುವೆಯೂ ಸೆಪ್ಟೆಂಬರ್​ 22 ರಿಂದ ಜಾತಿ ಗಣತಿ ಸಮೀಕ್ಷೆ (Caste Census Survey) ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಆದಿ ಚುಂಚನಗಿರಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಒಕ್ಕಲಿಗ ನಾಯಕರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸ್ವಾಮೀಜಿಗಳು ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಒಕ್ಕಲಿಗರ ಸಭೆಯಲ್ಲಿ ಪ್ರಮುಖ ನಿರ್ಣಯ

ಒಕ್ಕಲಿಗರ ನಾಯಕರ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳು ತೆಗೆದುಕೊಳ್ಳಲಾಗಿದೆ. ಒಕ್ಕಲಿಗರ ಸಮುದಾಯದವರ ಮನೆಗಳಿಗೆ ಜಾತಿ ಗಣತಿ ಸಮೀಕ್ಷೆಗೆಂದು ಬಂದಾಗ ಏನೆಂದು ಬರೆಸ್ಬೇಕು ಎಂಬ ಚರ್ಚೆ ನಡೆದಿದೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಒಕ್ಕಲಿಗ ಅಂತಷ್ಟೇ ಬರೆಸಬೇಕು ಎಂದು ನಿರ್ಧರಿಸಲಾಗಿದೆ.

‘ಒಕ್ಕಲಿಗ ಅಂತಾನೆ ಬರೆಸಬೇಕು’

ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ. ಯಾರು ಗೊಂದಲ ಮಾಡಿಕೊಳ್ಳದಂತೆ ಸಭೆಯಲ್ಲಿ ಶ್ರೀಗಳು ಸಲಹೆ ನೀಡಿದ್ದಾರೆ. ಬಳಿಕ ಉಪಜಾತಿಯನ್ನು ಬೇಕಾದ್ರೆ ನಮೂದಿಸಿ ಕುಂಚಟಿಗ , ಮರಸು, ಸರ್ಪ, ಹಳ್ಳಿಕಾರ್ ಒಕ್ಕಲಿಗ ಅಂತ ಬರೆಸಬಹುದು. ಆದ್ರೆ ಅದ್ರೆ ಜಾತಿ‌ ಕಾಲಂನಲ್ಲಿ ಒಕ್ಕಲಿಗ ಅಂತ ಮಾತ್ರ ಬರೆಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸ್ವಾಮೀಜಿ ನಿರ್ಣಯಕ್ಕೆ ನಾಯಕರ ಅನುಮೋದನೆಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳು ಈ ನಿರ್ಣಯಗಳನ್ನ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಹೆಚ್​ಡಿ ಕುಮಾರಸ್ವಾಮಿ, ಸದಾನಂದಗೌಡ ಸೇರಿದಂತೆ ಹಲವು ನಾಯಕರು ಅನುಮೋದಿಸಿದ್ದಾರೆ.ನಮ್ಮದು ದೊಡ್ಡ ಸಮುದಾಯ, ಅದ್ರಲ್ಲಿ ಉಪಪಂಗಡಗಳು ಸಹ ಇದೆ. ಮೂರು ಕಾಲಂ ಇರುತ್ತೆ. 9 ಜಾತಿ ಅಂತ ಇದೆ. ಒಕ್ಕಲಿಗ 10 ಉಪಜಾತಿ ಅಂತ ಇದೆ. ಹದಿನೈದು ದಿನಗಳು ಅವಕಾಶ ಕೊಟ್ಟಿದ್ದಾರೆ. ಜಾತಿ ಗಣತಿಗೆ ಇನ್ನೂ ಹೆಚ್ಚಿನ ದಿನಗಳು ಬೇಕು ಎಂದು ಡಿಸಿಎಂ ಡಿಕೆಶಿಗೆ ಶ್ರೀಗಳು ಹೇಳಿದ್ದಾರೆ.

‘ಜಾತಿ ಜನಗಣತಿ ಸಮೀಕ್ಷೆ ಮುಂದೂಡಿ’

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ನಿರ್ಮಲಾನಂದ ಸ್ವಾಮೀಜಿಗಳು, ಮತ್ತೊಮ್ಮೆ ಸರ್ಕಾರ ಜಾತಿ ಜನಗಣತಿ ಸಮೀಕ್ಷೆ ಮಾಡ್ತಿರೋದನ್ನ ಸ್ವಾಗತ ಮಾಡ್ತೀವಿ. ಆದ್ರೆ ಹದಿನೈದು ದಿನಗಳಲ್ಲಿ ಒಂಬತ್ತು ದಿನಗಳು ನವರಾತ್ರಿಯಲ್ಲಿ ಸಂಭ್ರಮ ಇರುತ್ತೆ. ಹೀಗಿರುವಾಗ ಸಮೀಕ್ಷೆ ಹೇಗೆ ಸಾಧ್ಯ? 400-500 ಕೋಟಿ ವೆಚ್ಚದ ಸಮೀಕ್ಷೆ ವ್ಯರ್ಥವಾಗುತ್ತೆ. ಹೀಗಾಗಿ ಸಮೀಕ್ಷೆ ಮುಂದೂಡಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.ಇದನ್ನ ಮುಂದೂಡಿ ಮತ್ತೆ ಹದಿನೈದು ದಿನಗಳ ಕಾಲ ಹೊಸದಾಗಿ ಆದೇಶ ಹೊರಡಿಸಬೇಕು. ಕ್ರಿಶ್ಚಿಯನ್ , ಜೈನ್ ಧರ್ಮವನ್ನು ನಮ್ಮ ಸಮಾಜಕ್ಕೆ ಸೇರಿಸಿದ್ದು ವೈರುದ್ಯವನ್ನುಂಟು ಮಾಡಿದಂತೆ. ನಮ್ಮ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿ ಕಳುಹಿಸಿದ್ದೇವೆ. ಸಮೀಕ್ಷೆ ಅನಿವಾರ್ಯ. ತೆಲಂಗಾಣದಲ್ಲಿ ಜನಸಂಖ್ಯೆ ಕಡಿಮೆ ಆದರೂ ಅಲ್ಲಿ ಮೂರು ತಿಂಗಳು ಸಮೀಕ್ಷೆ ಮಾಡಿದ್ದಾರೆ ಎಂದ್ರು.

ಸಮೀಕ್ಷೆ ಮುಂದೂಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ನಿರ್ಣಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಸ್ವಾಮೀಜಿ, ನಾವು ನಮ್ಮ ಡಿಮ್ಯಾಂಡ್ ಮಾಡಿದ್ದೇವೆ. ಪ್ರಜ್ಞಾವಂತ ಸರ್ಕಾರ ಅದರ ಬಗ್ಗೆ ಗಮನ ಹರಿಸುವ ವಿಶ್ವಾಸ ಇದೆ. ಸರ್ಕಾರದಲ್ಲಿ ನಮ್ಮ ಸಮಾಜದ ಜನಪ್ರತಿನಿಧಿಗಳು ಇದ್ದಾರೆ. ಅವರಿಗೆ ನಾವು ಹೇಳಿ ಕಳುಹಿಸಿದ್ದೇವೆ. ಮುಂದೂಡುವ ಬಗ್ಗೆ ಅವರು ಅಲ್ಲಿ ಮಾತಾಡ್ತಾರೆ ಎಂದು ಶ್ರೀಗಳು ತಮ್ಮ ಸಮುದಾಯದ ನಿರ್ಣಯಗಳನ್ನು ತಿಳಿಸಿದ್ರು.

[t4b-ticker]
error: Content is protected !!