ಎಸ್ಸಿ, ಎಸ್ಪಿ ಪ್ರದೇಶದಲ್ಲಿ 5000 ತಿಮ್ಮಪ್ಪನ ದೇಗುಲ: ನಾಯ್ಡು

Picture of Savistara

Savistara

Bureau Report

ತಿರುಮಲ: ಹಿಂದುಳಿದವರ ಮತಾಂತರ ತಡೆಯಲು ಮತ್ತು ಹಿಂದೂಗಳಲ್ಲಿ ಒಗ್ಗಟ್ಟನ್ನು ವೃದ್ಧಿಸಲು, ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿರುವ ಬಡಾವಣೆಗಳಲ್ಲಿ 5 ಸಾವಿರಕ್ಕೂ ಅಧಿಕವೆಂಕಟೇಶ್ವರ ದೇವಸ್ಥಾನಗಳನ್ನು ನಿರ್ಮಿಸುವಂತೆ ಆಂಧ್ರ ಪ್ರದೇಶಸಿಎಂ ಚಂದ್ರಬಾಬು ನಾಯ್ಡು ಟಿಟಿಡಿಗೆ ಸೂಚಿಸಿದ್ದಾರೆ.ಬುಧವಾರ ಪರಿವಾರ ಸಮೇತರಾಗಿ ತಿರುಮಲಕ್ಕೆ ಭೇಟಿ ನೀಡಿದ್ದನಾಯ್ಡು, ರಾಜ್ಯಾದ್ಯಂತ, ಅನ್ಯ ರಾಜ್ಯಗಳಲ್ಲಿ, ತೆಲುಗು ಭಾಷಿಕರು ಹೆಚ್ಚಾಗಿರುವ ಕಡೆಗಳಲ್ಲಿ ಬಾಲಾಜಿ ದೇಗುಲ ನಿರ್ಮಾಣದ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.ಬಿಜೆಪಿಯಿಂದ ಬೆಂಬಲ: ಈ ನಿರ್ಧಾರವನ್ನು ಸ್ವಾಗತಿಸಿರುವಬಿಜೆಪಿ ನಾಯಕಿ ಯಾಮಿನಿ ಶರ್ಮಾ, ‘ಜಗನ್‌ ಆಡಳಿತಾವಧಿ ಯಲ್ಲಿರಾಜ್ಯದಲ್ಲಿ ಅನೇಕಚರ್ಚ್‌ ನಿರ್ಮಾಣವಾಗಿಎಸ್‌ಸಿ, ಎಸ್ಟಿಗಳಮತಾಂತರವಾಗಿದೆ.ಹಾಗಾಗಿ ಬಾಲಾಜಿ ದೇವಸ್ಥಾನ ನಿರ್ಮಾಣ ಅಗತ್ಯ’ ಎಂದು ಹೇಳಿದ್ದಾರೆ.ಶರ್ಮಿಳಾಟೀಕೆ: ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಶರ್ಮಿಳಾ ಟೀಕಿಸಿ, ‘ಹಿಂದುಳಿದವರ ಏಳೆಗೆ ದೇವಸ್ಥಾನಕ್ಕೆ ಮೀಸಲಿಟ್ಟಿರುವ ನಿಧಿಯಲ್ಲಿ ಅವರ ಅಭಿವೃದ್ಧಿ ಮಾಡಲಿ’ ಎಂದಿದ್ದಾರೆ.

[t4b-ticker]
error: Content is protected !!