ಇತಿಹಾಸದಲ್ಲಿ ಮೊದಲ ಬಾರಿಗೆ ನಾಣ್ಯದ ಮೇಲೆ RSS; 100ನೇ ವಾರ್ಷಿಕೋತ್ಸವದಲ್ಲಿ ಮೋದಿ ಬಿಡುಗಡೆ!

Picture of Savistara

Savistara

Bureau Report

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶತಮಾನೋತ್ಸವ (100 Years Of Celebration) ಸಮಾರಂಭ ಇಂದು ನಡೆಯಿತು.ಅಕ್ಟೋಬರ್ 1, 2025 ದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶತಮಾನೋತ್ಸವ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮುಖ್ಯ ಅತಿಥಿಯಾಗಿ ಭಾಗವಹಿಸಿ, ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ (Stamp) ಮತ್ತು 100 ರೂಪಾಯಿ ನಾಣ್ಯವನ್ನು (₹100 Coin) ಬಿಡುಗಡೆ ಮಾಡಿದರು. ಇದು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ಲಾಂಛನ ಹೊಂದಿರುವ ನಾಣ್ಯವಾಗಿದೆ.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಕೇಂದ್ರ ಸಚಿವರು, ಹಿರಿಯ ಕಾರ್ಯಕರ್ತರು ಮತ್ತು ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದರು.

ನಾವು ಶತಮಾನೋತ್ಸವ ಸಾಕ್ಷಿಯಾಗಿರುವುದಕ್ಕೆ ಅದೃಷ್ಟವಂತರು ಎಂದ ಮೋದಿ!

ಪ್ರಧಾನಿ ಮೋದಿ, “ಇಂದು ಮಹಾನವಮಿ. ಎಲ್ಲರಿಗೂ ನವರಾತ್ರಿ ಶುಭಾಶಯಗಳು. ನಾಳೆ ವಿಜಯದಶಮಿ, ಅನ್ಯಾಯದ ಮೇಲೆ ನ್ಯಾಯದ, ಕತ್ತಲೆಯ ಮೇಲೆ ಬೆಳಕಿನ ವಿಜಯದ ಹಬ್ಬವಾಗಿದೆ. 100 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಈ ದಿನವೇ ಸ್ಥಾಪನೆಯಾಯಿತು. ಇದು ಕಾಕತಾಳೀಯವಲ್ಲ” ಎಂದು ಹೇಳಿದರು. “ಶತಮಾನೋತ್ಸವ ಸಾಕ್ಷಿಯಾಗಿರುವ ನಮ್ಮ ಪೀಳಿಗೆ ಅದೃಷ್ಟವಂತ. ದೇಶ ಸೇವೆಗೆ ಸಮರ್ಪಿವಾದತ ಎಲ್ಲ ಸ್ವಯಂಸೇವಕರಿಗೆ ಶುಭಾಶಯಗಳು” ಎಂದರು. ಆರ್‌ಎಸ್‌ಎಸ್‌ನ 100 ವರ್ಷಗಳ ಸೇವೆಯನ್ನು ಗುರುತಿಸಲು ಬಿಡುಗಡೆಯಾದ ಅಂಚೆ ಚೀಟಿ ಮತ್ತು ನಾಣ್ಯವು ಐತಿಹಾಸಿಕವೆಂದು ಅವರು ಒತ್ತಿ ಹೇಳಿದರು.

ವಿಶೇಷ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ!

ಇಂದು ವಿಶೇಷವಾದ ನೂರು ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. 100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದ್ದರೆ, ಇನ್ನೊಂದು ಬದಿಯಲ್ಲಿ ಸಿಂಹ ಮತ್ತು ಸ್ವಯಂಸೇವಕರು ಭಕ್ತಿಯಿಂದ ನಮಸ್ಕರಿಸುವ ಭಾರತ ಮಾತೆಯ ಚಿತ್ರವಿದೆ. “ಭಾರತ ಮಾತೆಯ ಚಿತ್ರವು ಭಾರತೀಯ ಕರೆನ್ಸಿಯಲ್ಲಿ, ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ” ಎಂದು ಮೋದಿ ಹೇಳಿದ್ದಾರೆ.

ಅಂಚೆ ಚೀಟಿಯು 1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರ ದೇಶಭಕ್ತಿಯ ಭಾಗವಹಿಸುವಿಕೆಯನ್ನು ಸ್ಮರಿಸುತ್ತದೆ. “ಈ ಅಂಚೆ ಚೀಟಿಯು ಆ ಐತಿಹಾಸಿಕ ಕ್ಷಣವನ್ನು ಗೌರವಿಸುತ್ತದೆ. ರಾಷ್ಟ್ರ ಸೇವೆಗೆ ಸಮರ್ಪಿತ ಸ್ವಯಂಸೇವಕರನ್ನು ಪ್ರತಿಫಲಿಸುತ್ತದೆ” ಎಂದು ಅವರು ಹೇಳಿದರು.

ಆರ್‌ಎಸ್‌ಎಸ್‌ನ ಕೊಡುಗೆ!

ಪ್ರಧಾನಿ ಮೋದಿ ಆರ್‌ಎಸ್‌ಎಸ್‌ನ 100 ವರ್ಷಗಳ ಸೇವೆಯನ್ನು ಶ್ಲಾಘಿಸಿದರು. “ಸಂಘವು ರಾಷ್ಟ್ರವನ್ನು ಮೊದಲಿಗಿಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸ್ವಯಂಸೇವಕರು ದೌರ್ಜನ್ಯವನ್ನು ಎದುರಿಸಿದರು. ಸಂಘವು ಲೆಕ್ಕವಿಲ್ಲದ ತ್ಯಾಗಗಳನ್ನು ಮಾಡಿದೆ” ಎಂದು ಅವರು ಹೇಳಿದರು. ಸಂಘದ ಶಾಖೆಗಳು ದೈಹಿಕ, ಮಾನಸಿಕ ಬೆಳವಣಿಗೆಗೆ ಸ್ಫೂರ್ತಿಯ ಕೇಂದ್ರವಾಗಿವೆ ಎಂದು ಒತ್ತಿ ಹೇಳಿದರು. “ಸಂಘವು ಒಂದು ಭಾರತ, ಶ್ರೇಷ್ಠ ಭಾರತದ ಗುರಿಯೊಂದಿಗೆ ಕೆಲಸ ಮಾಡುತ್ತದೆ.

ಸ್ವಾತಂತ್ರ್ಯದ ನಂತರವೂ ದಾಳಿಗಳನ್ನು ಎದುರಿಸಿತು, ಪಿತೂರಿಗಳನ್ನು ಎದುರಿಸಿತು, ಮುಖ್ಯವಾಹಿನಿಯಿಂದ ಹೊರಗಿಡಲು ಪ್ರಯತ್ನಗಳಾದವು. ಆದರೆ ಸಂಘ ತನ್ನ ಸೇವೆಯಿಂದ ಎಲ್ಲವನ್ನೂ ಜಯಿಸಿತು” ಎಂದು ಮೋದಿ ಹೇಳಿದರು.

ಈ ಕಾರ್ಯಕ್ರಮವು ಆರ್‌ಎಸ್‌ಎಸ್‌ನ ಶತಮಾನದ ಸಾಧನೆಯನ್ನು ಗೌರವಿಸಿತು. 1925ರ ವಿಜಯದಶಮಿಯಂದು ಡಾ. ಕೇಶವ ಬಲಿರಾಮ ಹೆಡಗೇವಾರ್ ಸ್ಥಾಪಿಸಿದ ಆರ್‌ಎಸ್‌ಎಸ್, ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತನ್ನ ಛಾಪು ಮೂಡಿಸಿದೆ. ಸಂಘದ ಸ್ವಯಂಸೇವಕರು ಶಿಕ್ಷಣ, ಆರೋಗ್ಯ, ವಿಪತ್ತು ನಿರ್ವಹಣೆಯಲ್ಲಿ ಕೊಡುಗೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸಂಘದ 100 ವರ್ಷಗಳ ತ್ಯಾಗ, ಸೇವೆ ಕೊಂಡಾಡಿದ ಮೋದಿ!ಆರ್‌ಎಸ್‌ಎಸ್ ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿ ವಿಶೇಷ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ, ಸಂಘದ ಸೇವೆಯನ್ನು ಶ್ಲಾಘಿಸಿದರು. ಭಾರತ ಮಾತೆಯ ಚಿತ್ರವಿರುವ ನಾಣ್ಯ ಮತ್ತು 1963ರ ಮೆರವಣಿಗೆಯನ್ನು ಸ್ಮರಿಸುವ ಅಂಚೆ ಚೀಟಿಯು ಐತಿಹಾಸಿಕವಾಗಿವೆ. ಸಂಘದ 100 ವರ್ಷಗಳ ತ್ಯಾಗ, ಸೇವೆಯನ್ನು ಕೊಂಡಾಡಿದ ಮೋದಿ, ರಾಷ್ಟ್ರಪ್ರಥಮದ ಗುರಿಯನ್ನು ಒತ್ತಿ ಹೇಳಿದರು. ಈ ಘಟನೆ ಆರ್‌ಎಸ್‌ಎಸ್‌ನ ಕೊಡುಗೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದೆ ಮತ್ತು ದೇಶಭಕ್ತಿಯ ಸ್ಫೂರ್ತಿಯನ್ನು ಮತ್ತಷ್ಟು ಉತ್ತೇಜಿಸಿದೆ.

[t4b-ticker]
error: Content is protected !!