ಸುಳ್ಯ ರಥಬೀದಿ – ಎಪಿಯಂಸಿ ಬಳಿ ಪೋಲಾಗುತ್ತಿದೆ ಕುಡಿಯುವ ನೀರು | ವಾರ ಕಳೆದರು ಸರಿಪಡಿಸದೆ ಕಣ್ಮುಚ್ಚಿ ಕುಳಿತ ವ್ಯವಸ್ಥೆ,ಸಾರ್ವಜನಿಕರ ಅಸಮಾಧಾನ

Picture of Savistara

Savistara

Bureau Report

ಸುಳ್ಯ: ಸುಳ್ಯ ನಗರದ ರಥ ಬೀದಿಯ ರೋಟರಿ ಶಾಲಾ ಮುಂಭಾಗ ಮತ್ತು ಎಪಿಯಂಸಿ ಎದುರುಗಡೆ ಮುಖ್ಯ ರಸ್ತೆಯಲ್ಲಿ ಕಳೆದ ಎರಡು ವಾರಗಳಿಂದ ಕುಡಿಯುವ ನೀರಿನ ಪೋಲ್ ಪೈಪಿ ನಲ್ಲಿ ನಿರಂತರವಾಗಿ ಓವರ್ ಫ್ಲೋ ನಿಂದ ಪೋಲಾಗಿ ರಸ್ತೆ ಯಲ್ಲಿ ನೀರು ಹರಿಯುತ್ತಿದೆ.

ಪ್ರತಿ ಹನಿ ನೀರು ಮುಖ್ಯವಾಗಿರುವ ಈ ಸಂದರ್ಭದಲ್ಲಿ ಈ ರೀತಿ ಅಧಿಕ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದೆ ಮತ್ತೊಂದು ಕಡೆ ಈ ರೀತಿ ಓವರ್ ಫ್ಲೋ ಆಗಿ ಹರಿಯುತ್ತಿರುವುದು ವ್ಯವಸ್ಥೆಯ ಬಗ್ಗೆ ಜನ ಆಡಿಕೊಳ್ಳುವಂತಾಗಿದೆ ತಕ್ಷಣ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿ ವರ್ಗ,ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಸರಿಪಡಿಸುವಂತೆ ನಾಗರೀಕರು ಒತ್ತಾಯಿಸಿದ್ದಾರೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!