ಧರ್ಮಸ್ಥಳದ ಪಾಂಗಾಳ ನಿವಾಸಿ.ದಿ.ಚಂದಪ್ಪ ಗೌಡ ಕುಸುಮಾವತಿ ದಂಪತಿ ಪುತ್ರಿ ,ಎಸ್ ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಳ ಭೀಕರ ಅತ್ಯಾಚಾರ, ಕೊಲೆ ಪ್ರಕರಣ ನಡೆದು 13 ವರ್ಷಗಳಾಗುತಿದೆ.
ನೈಜ ಅಪರಾಧಿಗಳ ಬಂಧಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಿ ಹಾಗು ಅವಳ ಆತ್ಮಕ್ಕೆ ನ್ಯಾಯ ದೊರಕಿ ಶಾಂತಿ ಸಿಗಲೆಂದು, ಈಗಾಗಲೆ ಸರಕಾರ ರಚಿಸಿದ ಎಸ್ ಐಟಿ ತನಿಖೆ ಪಾರದರ್ಶಕ ನಡೆಯುವಂತೆ ಮತ್ತು ಸೌಜನ್ಯ ಹೋರಾಟಗಾರ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ತೇಜೋವಧೆ ನಡೆಸಿ ಜೈಲಿಗಟ್ಟುವ ಹುನ್ನಾರಗಳು ಅಂತ್ಯವಾಗುವ ಮೂಲಕ ನ್ಯಾಯಯುತ ಹೋರಾಟಕ್ಕೆ ಗೆಲುವಾಗುವಂತೆ ಪ್ರಾರ್ಥಿಸಿ ದಿನಾಂಕ ಅಕ್ಟೋಬರ್ 09, 2025 ರ ಗುರುವಾರದಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇ಼ಷ ಪೂಜೆ ಸಲ್ಲಿಸಲಾಗುವುದು.
ಈಗಾಗಲೇ ತಮಗೆಲ್ಲರಿಗೂ ತಿಳಿದಿರುವಂತೆ ಸೌಜನ್ಯ ಪರ ನ್ಯಾಯಯುತ ಹೋರಾಟ ತಾರ್ಕಿಕ ಅಂತ್ಯದೆಡೆಗೆ ಸಾಗುತಿದ್ದು, ಎಸ್ ಐಟಿ ತನಿಖೆ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದೆ. ಈ ನಡುವೆ ಈ ಹೋರಾಟಕ್ಕೆ ದೀರ್ಘಕಾಲಿನ ನಾಯಕತ್ವ ನೀಡಿ ಸಾರ್ವಜನಿಕರಿಂದ ರಾಜ್ಯ ಮಾತ್ರವಲ್ಲ ದೇಶದ ಅಪ್ರತಿಮ ಹೋರಾಟಗಾರರೆನಿಸಿದ ಮಹೇಶ್ ತಿಮರೋಡಿ ವಿರುದ್ಧ ದುಷ್ಟಶಕ್ತಿಗಳು ತೇಜೊವಧೆ ನಡೆಸಿ ಜೈಲಿಗಟ್ಟಲು ಸಾಲು ಸಾಲು ಕೇಸು ದಾಖಲಿಸಿ ಪಿತೂರಿ ನಡೆಸುತಿರುವುದು ಖಂಡನೀಯ. ಈಗಾಗಲೆ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ರುವ ಪ್ರಕರಣಕ್ಕೆ ಸಂಬಂದಿಸಿ ಅವರಿಗೆ ಜಾಮೀನು ದೊರೆಯಲಿ, ಯಾವುದೇ ಒತ್ತಡಕ್ಕೊಳಗಾಗದೆ ಎಸ್ಐಟಿ ತನಿಖೆ ಪಾರದರ್ಶಕ ವಾಗಿ ನಡೆದು ರಾಷ್ಟ್ರಕ್ಕೆ ಒಂದೊಳ್ಳೆಯ ಸಂದೇಶ ದೊರಕುವಂತಾಗಲಿ.
ಭ್ರಷ್ಟ ರಾಜಕೀಯ ನೇತಾರರಿಗೆ, ಅಧಿಕಾರಿ ವರ್ಗಕ್ಕೆ ಹಾಗು ಸಮಾಜವನ್ನು ನ್ಯಾಯದ ದಿಕ್ಕುತಪ್ಪಿಸುವ ಯಾವುದೇ ವ್ಯವಸ್ಥೆ ಮತ್ತು ಭ್ರಷ್ಟ ಮನಸ್ಸುಗಳಿಗೆ ಎಚ್ಚರಿಕೆಯ ಕರೆಗಂಟೆಯಾಗುವಂತ ತನಿಖಾವರದಿಯನ್ನು ನೀಡುವಂತಾಗಲಿ ಎಂದು ಆಗ್ರಹಿಸುತ್ತೇವೆ. ಇದಕ್ಕೆ ಪೂರಕವಾಗಿ ಈ ಹಿಂದಿನಂತೆ ಸುಳ್ಯ ತಾಲೂಕು ಹೋರಾಟ ಸಮಿತಿ ವತಿಯಿಂದ ಮುಂದೆ ಬೃಹತ್ ಹೋರಾಟವನ್ನು ನಡೆಸಲಿದ್ದು, ಸಮಾವೇಶ ಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸೌಜನ್ಯ ಹೋರಾಟಗಾರರು ಭಾಗವಹಿಸಲಿದ್ದಾರೆ. ಈ ಕುರಿತ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದೆಂದು ಸಂಚಾಲಕರು,ಸದಸ್ಯರು ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ಸುಳ್ಯ ತಾಲೂಕು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














































