ಮಾರಿಷಸ್ ನಲ್ಲಿ ವಿದ್ಯಾರ್ಜನೆ ನಡೆಸುತ್ತಿದ್ದ ನಾಲ್ಕೂರು ಗ್ರಾಮದ ಹಲ್ಗುಜಿ, ಕಲ್ಲಾಜೆ ನಿವಾಸಿ ನಂದನ್ ಭಟ್ ಎಂಬ ಯುವಕ ಅಲ್ಲಿ ಜಲಪಾತ ವೀಕ್ಷಣೆಯ ವೇಳೆ ಬಿದ್ದು ದುರ್ಮರಣಕ್ಕೀಡಾಗಿದ್ದು, ಇವರ ಮೃತದೇಹ ಬೆಂಗಳೂರು ತಲುಪಿದ್ದು, ಸಂಸದ ಕ್ಯಾ ಬ್ರಿಜೇಶ್ ಚೌಟ ರ ಗಮನಕ್ಕೆ ಬಂದಾಗ ತಕ್ಷಣ ವಿದೇಶಾಂಗ ಇಲಾಖೆ ಸಂಪರ್ಕಿಸಿ ಭಾರತೀಯ ರಾಯಭಾರ ಮೂಲಕ ಮೃತದೇಹವ ಹುಟ್ಟೂರಿಗೆ ಇಂದು ರಾತ್ರಿ ಆಗಮಿಸಲಿದೆ, ಪ್ರಯಾಣ ವೆಚ್ಚವನ್ನು ಕೂಡಾ ಸರ್ಕಾರ ಬರಿಸಲಿದೆ ಯೆಂದು ತಿಳಿದು ಬಂದಿದೆ. ಸಂಸದರ ಸ್ಪಂದನೆಗೆ ಮೃತ ಸಂಬಂಧಿಗಳು ಧನ್ಯವಾದ ತಿಳಿಸಿದ್ದಾರೆ. ಮೃತ ಯುವಕಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬವರ ಪುತ್ರರಾಗಿರುವ ನಂದನ್ ಎಸ್. ಭಟ್ ಅವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಅಧ್ಯಯನ ನಡೆಸುತ್ತಿದ್ದರು. ಜಲಪಾತ ವೀಕ್ಷಣೆಗೆಂದು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ವಿಶೇಷ ಪ್ರಯತ್ನ,ಪ್ರಯಾಣ ವೆಚ್ಚ ಭರಿಸಿದ ಸರ್ಕಾರ |ಮಾರೀಷಸ್ ಲ್ಲಿ ದುರ್ಮರಣಗೊಂಡಿದ್ದ ಯುವಕನ ಮೃತದೇಹ ತಾಯ್ನಾಡಿಗೆ
Savistara
Bureau Report
[t4b-ticker]














































