ಸುಳ್ಯ ತಾಲೂಕಿನ ಕುಂಡಡ್ಕದಲ್ಲಿ ಸಿಡಿಲಿನ ಆಘಾತ | ಮೂವರಿಗೆ ಗಾಯ : ಆಸ್ಪತ್ರೆಗೆ ದಾಖಲು

Picture of Savistara

Savistara

Bureau Report

ಕುಂಡಡ್ಕ : ಪೆರುವಾಜೆ ಗ್ರಾಮದ ಕುಂಡಡ್ಕ ಸಾರಕರೆ ಬಳಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಸಾರಕರೆ ನಿವಾಸಿ ಭಾರತಿ, ಪುತ್ರಿಯರಾದ ಸುಶ್ಮಿತಾ, ಲತಾಶ್ರೀ ಅವರು ಗಾಯಗೊಂಡವರು. ರಾತ್ರಿ‌ 7.30 ಗಂಟೆ ಹೊತ್ತಿಗೆ ಭಾರೀ ಸಿಡಿಲಿನ‌ ಸದ್ದು ಕೇಳಿ ಬಂದಿದ್ದು ಈ ವೇಳೆ ಮನೆ ಒಳಗಿನ ಅಡುಗೆ ಕೋಣೆಯಲ್ಲಿ ಇದ್ದ ಮೂವರಿಗೆ ಸಿಡಿಲಿನ ಅಘಾತ ಉಂಟಾಗಿದೆ. ತತ್ ಕ್ಷಣ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಬ್ಬರಿಗೆ ಹೆಚ್ಚಿನ ಗಾಯ ಉಂಟಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!