ರಿಷಬ್ ಶೆಟ್ಟಿ ಅವರು ಹಿಂದಿಯ ‘ಕೌನ್ ಬನೇಗಾ ಕರೋತ್ಪತಿ’ ಶೋಗೆ ಸ್ಪರ್ಧಿಯಾಗಿ ತೆರಳಿದ್ದು ಈ ಶೋನಲ್ಲಿ ಬರೋಬ್ಬರಿ 12.50 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಈ ಹಣವನ್ನು ದೈವಾರಾಧಕರು ಹಾಗೂ ಸರ್ಕಾರಿ ಶಾಲೆಗಳ ಏಳೆಗೆ ಬಳಕೆ ಮಾಡೋದಾಗಿ ರಿಷಬ್ ಶೆಟ್ಟಿ ಅಮಿತಾಬ್ ಮುಂದೆ ಘೋಷಿಸಿದ್ದಾರೆ.’ಕಾಂತಾರ: ಚಾಪ್ಟರ್ 1′ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಗೆಲುವು ಕಂಡಿದ್ದು ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಅವರು ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಈಗ ಅವರು ‘ಕೆಬಿಸಿ’ ಶೋನಲ್ಲೂ ಮಿಂಚಿದ್ದು 12 ಪ್ರಶ್ನೆಗಳನ್ನು ಎದುರಿಸಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು 12.5 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ವೇಳೆ ಟೈಮ್ ಅಪ್ ಆಗಿದೆ.ಆಟ ಶುರುವಾಗುವುದಕ್ಕೂ ಮೊದಲೇ ಹಣವನ್ನು ಎಲ್ಲಿ ಬಳಸುತ್ತೇನೆ ಎಂಬುದನ್ನು ವಿವರಿದ ರಿಷಭ್ ಶೆಟ್ಟಿ ‘ರಿಷಬ್ ಫೌಂಡೇಷನ್ ಅನ್ನು ನಾನು ನಡೆಸುತ್ತಿದ್ದೇನೆ. ಇದರಲ್ಲಿ ಬಂದ ಹಣವನ್ನು ನಾನು ಚಾರಿಟಿ ಮೂಲಕ ಸರ್ಕಾರಿ ಶಾಲೆ ಹಾಗೂ ದೈವ ನರ್ತಕರಿಗೆ ಸಹಾಯ ಮಾಡಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.
‘ಕೌನ್ ಬನೇಗಾ ಕರೋಸ್ಪತಿ’ ಶೋನಲ್ಲಿ ಗೆದ್ದ ಹಣವನ್ನು ಸರ್ಕಾರಿ ಶಾಲೆಗಳು ಮತ್ತು ದೈವಾರಾಧಕರ ಏಳಿಗೆಗೆ ಬಳಸುವುದಾಗಿ ಘೋಷಿಸಿದ ರಿಷಬ್ ಶೆಟ್ಟಿ
Savistara
Bureau Report
[t4b-ticker]














































