ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಸಾಹಿತ್ಯದ್ದಾಗಿದ್ದು, ಸಮಾಜದಲ್ಲಿ ಒಳ್ಳೆಯ ಚಿಂತನೆ ಗಳನ್ನು ಅರಳಿಸಿ ಬೆಳೆಸುವುದು ಹಾಗೂ ಸನ್ಮಾರ್ಗದಲ್ಲಿ ಮುನ್ನಡೆಸುವುದರಲ್ಲಿ ಸಾಹಿತ್ಯ ಕ್ಷೇತ್ರದ ಹೊಣೆಗಾರಿಕೆ ಹೆಚ್ಚು ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹೇಳಿದರು.’ನೂರು ಹೆಜ್ಜೆ ನೂರಾರು ಮಾತು’ ಶೀರ್ಷಿಕೆಯಡಿ ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯ ವಿಚಾರ ಕುರಿತು ಬೇರೆ ಬೇರೆ ವಾಕ್ಯಗಳನ್ನು ಕೇಳಿದ್ದೇವೆ, ಓದಿದ್ದೇವೆ. ಅನೇಕರು ಹಲವು ರೀತಿಗಳಲ್ಲಿ ಅರ್ಥೈಸು ತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಹಿರಿಯ ಸಾಹಿತಿ ಗಳೊಬ್ಬರು ರಾಷ್ಟ್ರೀಯತೆ ಎಂದರೆ ಅತ್ಯಂತ ಅಪಾಯ ಕಾರಿ ವಿದ್ಯಮಾನ, ದೇಶದ ಬಹುತ್ವವನ್ನು ನಾಶ ಮಾಡುತ್ತದೆ, ಏಕರೂಪತೆಯನ್ನು ಸ್ಥಾಪಿಸಲು ಪ್ರಯ ತ್ನಿಸುತ್ತಿದೆ, ಭಿನ್ನಮತಗಳು ಭಿನ್ನವಾದಗಳನ್ನು ನಾಶ ಮಾಡುವ ಪ್ರಯತ್ನವನ್ನು ಮಾಡುತ್ತಿದೆ, ಹಾಗಾಗಿ ರಾಷ್ಟ್ರೀಯತೆ ನಮ್ಮ ದೇಶದ ವೈವಿಧ್ಯತೆಗೆ ಮಾರಕ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.ರಾಷ್ಟ್ರವಾದ, ಉಗ್ರ ರಾಷ್ಟ್ರವಾದ ಈ ರೀತಿಯ ಶಬ್ದ ಪ್ರಯೋಗಗಳನ್ನೂ ಆಗಾಗ ನಾವು ಕೇಳುತ್ತಿದ್ದೇವೆ. ರಾಷ್ಟ್ರೀಯತೆ ಎಂದು ಹೇಳಿದಾಗ ಕಳವಳ ಪಡುವ, ಚಿಂತೆ ಮಾಡುವ ವಿಚಿತ್ರ ವರ್ಗ ಸಾಹಿತ್ಯ ವಲಯದಲ್ಲಿ ಇರುವುದನ್ನು ಕಾಣುತ್ತಿದ್ದೇವೆ. ಅವರಿಗೆ ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆ ಗಳೂ ಆತಂಕ ಉಂಟು ಮಾಡುತ್ತವೆ. ಇಂಥ
ಮಾತುಗಳನ್ನು ಕೇಳಿಸಿಕೊಂಡಾಗ ಮೂಲ ರಾಷ್ಟ್ರೀಯ ವಿಚಾರ ಎಂದರೆ ಯಾವ ವಿಚಾರ ಎಂಬ ಸಂಶಯ ಬರುವಂತೆ ಮಾಡಲಾಗುತ್ತಿದೆ. ಇದೆಲ್ಲವನ್ನೂ ಹಿಡಿದಿಟ್ಟುಕೊಂಡ ಸಂಗತಿ, ಶಕ್ತಿ, ತತ್ವವೇ ರಾಷ್ಟ್ರೀಯತೆ ಯಾಗಿದೆ. ಹೀಗಾಗಿ, ನಮ್ಮ ರಾಷ್ಟ್ರೀಯತೆ ಎಂದರೆ
ಅದೊಂದು ಸಾಂಸ್ಕೃತಿಕ ಪರಿಕಲ್ಪನೆ ಎಂದು ಸ್ಪಷ್ಟ ಪಡಿಸಿದರು.ನಮ್ಮ ದೇಶದಲ್ಲಿ 1600 ಭಾಷೆಗಳಿವೆ. ಈ ಪೈಕಿ 10 ಸಾವಿರಕ್ಕೂ ಹೆಚ್ಚು ಜನ ಮಾತನಾಡುವ 120 ಭಾಷೆ ಗಳಿವೆ. ಹೀಗೆ ಸಾವಿರಾರು ಭಾಷೆಗಳು, ನೂರಾರು
ಮತಸಂಪ್ರದಾಯಗಳು, ಸಾವಿರಾರು ಜಾತಿಗಳು ಹೀಗೆ ವೈವಿಧ್ಯತೆಗಳಿವೆ. ಜಾತಿ, ಮತ, ಪಂಥ, ಪ್ರಾಂತ ಇಷ್ಟೆಲ್ಲಾ ವೈವಿಧ್ಯಗಳ ಮಧ್ಯೆ ಪ್ರಾಚೀನ ಕಾಲದಿಂದ ಒಂದಾಗಿ ಬಾಳುತ್ತಿದ್ದೇವೆ ಇವೆಲ್ಲವೂ ರಾಷ್ಟ್ರೀಯ ವಿಚಾರಗಳೇ. ನಮ್ಮ ದೇಶದಲ್ಲಿ ಹಿಂದೆ ಬೇರೆಬೇರೆ ಗಣರಾಜ್ಯಗಳ ಆಡಳಿತವಿತ್ತು. ಆದರೆ ಅದು ಸಾಂಸ್ಕೃತಿಕವಾಗಿ ಒಂದೇ ರಾಷ್ಟ್ರವಾಗಿತ್ತು ಎಂದರು.ಅಭಾಸಾಪ ರಾಜ್ಯ ಸಹ ಖಜಾಂಚಿ ಭ.ರಾ. ವಿಜಯ್ ಕುಮಾರ್‌ರು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪರ ಸ್ಮರಿಸಿದರು. ದೇಶಭಕ್ತಿ ಗೀತೆಗಳನ್ನು ರಚಿಸಿದ ಕವಯಿತ್ರಿ ಶಾರದಾ ವಿ. ಮೂರ್ತಿ ಹಾಗೂ ಭಾರತ ಭಾರತಿ ಪುಸ್ತಕ ಸಂಪದ-2ರ ಪ್ರಧಾನ ಸಂಪಾದಕ ರಾಗಿದ್ದ ಹಿರಿಯ ಪತ್ರಕರ್ತ ಚಿರಂಜೀವಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್, ಅಭಾಸಾಪ ಬೆಂಗಳೂರು ಮಹಾನಗರ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ, ಅಭಾಸಾವ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನರೂರ ಇದ್ದರು.
1965ರಲ್ಲಿ ಭಾರತೀಯ ತತ್ವ, ಜೀವನ, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ, ಜನಮಾನಸಕ್ಕೆ ನೆಲೆಗೊಳಿಸಬೇಕು ಎಂಬ ಉದ್ದೇಶದಿಂದ ರಾಷ್ಟೋತ್ಥಾನ ಪರಿಷತ್ ಪ್ರಾರಂಭವಾಯಿತು. ಇಲ್ಲಿಯವರೆಗೆ 300ಕ್ಕೂ ಹೆಚ್ಚು ರಾಷ್ಟ್ರೀಯ ವಿಚಾರ ಕುರಿತು ಪುಸ್ತಕಗಳನ್ನು ಪ್ರಕಟಿಸಿದೆ. ಅದರಲ್ಲಿ ನಾಲ್ಕು ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಸಂಘದ ಸಾಹಿತ್ಯ ಎಂದರೆ ರಾಷ್ಟ್ರೀಯ ವಿಚಾರದ ಸಾಹಿತ್ಯವೇ ಆಗಿದೆ.
–ಸುಧೀರ್, ಆರ್‌ಎಸ್‌ಎಸ್ ಪ್ರಮುಖರು













































