ಶೇ 3 ರಷ್ಟಿರುವವರು ಡಿಸಿಎಂ ಆಗುವುದಾದರೆ, ಶೇ 17 ರಷ್ಟಿರುವ ಮುಸ್ಲಿಮರು ಕೇವಲ ಕಾರ್ಪೆಟ್ ಹಾಸಬೇಕೇ..?

Picture of Savistara

Savistara

Bureau Report

Patna: ಬಿಹಾರ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪರ ರಣಕಹಳೆ ಮೊಳಗಿಸಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಓವೈಸಿ(Asaduddin Owaisi ) ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ ವಿರುದ್ಧ ತೀವ್ರ ದಾಳಿ ನಡೆಸಿದ್ದಾರೆ.ಗೋಪಾಲ್‌ಗಂಜ್ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ, ಬಿಹಾರದ ಸ್ಥಳೀಯ ರಾಜಕೀಯ ನಾಯಕರುಗಳು, ರಾಜ್ಯದ ಜನಸಂಖ್ಯೆಯ ಸುಮಾರು ಶೇ.17 ರಷ್ಟಿರುವ ಮುಸ್ಲಿಮರಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಾಮಾಜಿಕ ನ್ಯಾಯದ ಸೋಗಿನಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷದ ಸರ್ಕಾರಗಳು ನಮ್ಮ ಸಮುದಾಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿವೆ ಎಂದು ಆರೋಪಿಸಿದರು.

ರಾಜ್ಯದ ಜನಸಂಖ್ಯೆಯಲ್ಲಿ ಕೇವಲ 3% ರಷ್ಟಿರುವ ಮಲ್ಲಾ ಸಮುದಾಯವು ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆಯಬಹುದಾದರೆ, ಶೇ 14% ರಷ್ಟಿರುವ ಸಮುದಾಯವು ಮುಖ್ಯಮಂತ್ರಿಯೇ ಆಗಬಹುದಾದರೆ, 17% ರಷ್ಟಿರುವ ಜನರು ಕೇವಲ ಕಾರ್ಪೆಟ್ ಹಾಸಬೇಕೇ..? ಎಂದು ಪ್ರಶ್ನಿಸಿದರು.ಬಿಹಾರದಲ್ಲಿ 20 ವರ್ಷಗಳ ಕಾಲ ಅಧಿಕಾರ ನಡೆಸಿದ ನಿತೀಶ್ ಕುಮಾರ್ ಹೃದಯ ರಾಜ್‌ಗೀರ್‌ಗಾಗಿ ಬಡಿದುಕೊಳ್ಳುತ್ತಿದೆ, ಲಾಲು ಮತ್ತು ರಾಬ್ರಿ ಮನಸ್ಸು ತಮ್ಮ ಮಗ ತೇಜಶ್ವಿಗಾಗಿ ಮಿಡಿಯುತ್ತಿದೆ, ಪ್ರಧಾನಿ ಮೋದಿಯ ಹೃದಯ? ಅದು ಅಹಮದಾಬಾದ್‌ಗಾಗಿ ಮಾತ್ರ ಬಡಿದುಕೊಳ್ಳುತ್ತದೆ, ಆದರೆ ಬಿಹಾರದ ಮುಸ್ಲಿಮರ ಹೃದಯಗಳಿಗಾಗಿ ಯಾರು ಮಾತನಾಡುತ್ತಾರೆ? ಎಂದು ಪ್ರಶ್ನಿಸಿದರು. ಬಿಜೆಪಿ ಸದಾ ದ್ವೇಷವನ್ನು ಹರಡುತ್ತಿದೆ, ಆದರೆ ಆರ್‌ಜೆಡಿ ಮತ್ತು ಜೆಡಿಯು ಮುಸ್ಲಿಮರನ್ನು ಮೌನಗೊಳಿಸಲು ಭಯವನ್ನು ಬಳಸಿಕೊಂಡಿವೆ ಎಂದು ಆರೋಪಿಸಿದರು.

AIMIM ಪಕ್ಷ, ಬಿಜೆಪಿಯ ಬಿ-ಟೀಮ್ ಆಗಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ ಓವೈಸಿ, ಆರ್‌ಜೆಡಿ ಬಿಜೆಪಿಯ ಹೆಸರನ್ನು ಬಳಸಿಕೊಂಡು ಮುಸ್ಲಿಮರನ್ನು ಎಷ್ಟು ದಿನ ಹೆದರಿಸುತ್ತದೆ? ನಾನು ನನ್ನ ಜನರಿಗಾಗಿ ಧ್ವನಿ ಎತ್ತಿದಾಗ, ಅವರು ನನ್ನನ್ನು ಬಿ-ಟೀಮ್ ಎಂದು ಕರೆಯುತ್ತಾರೆ, ಇಂತಹ ಆರೋಪಗಳಿಂದ ದಾರಿ ಜನರು ತಪ್ಪಬಾರದು ಎಚ್ಚರಿಸಿದರು. ಬಿಹಾರದ ಸೀಮಾಂಚಲ್ ಪ್ರದೇಶದಲ್ಲಿ ವೋಟ್ ಬ್ಯಾಂಕ್ ಹೊಂದಿರುವ ಎಐಎಂಐಎಂ, ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ 32 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.ಚುನಾವಣೆ ಯಾವಾಗ..?ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬ‌ರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್‌ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.

[t4b-ticker]
error: Content is protected !!