ಸನಾತನವನ್ನು ಮುಗಿಸಲೆಂದೇ ನಾನು ಬಂದಿದ್ದೇನೆ: ಉದಯನಿಧಿ ಬಳಿಕ ಟಿವಿಕೆ ಎಂಎಲ್​ಎ ಮುಸ್ತಫಾ ವಿವಾದ!

Picture of Savistara

Savistara

Bureau Report

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್​, ಸನಾತನ ಧರ್ಮ ನಿರ್ಮೂಲನೆ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೆ ಈಗ ವಿಜಯ್​ ನೇತೃತ್ವದ ಟಿವಿಕೆ ಎಂಎಲ್​ಎ ವಿಎಮ್​ಎಸ್​ ಮುಸ್ತಫಾ (TVK Mustafa on Sanatana Dharma) ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಮುಸ್ತಫಾ ಹೇಳಿದ್ದೇನು?

ಮಧುರೈ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ವಿಎಮ್​ಎಸ್​ ಮುಸ್ತಫಾ, ಉದಯನಿಧಿ ಸ್ಟಾಲಿನ್​ ಅವರ ಹೇಳಿಕೆಯನ್ನು ಬೆಂಬಲಿಸಿದ್ದು ಮಾತ್ರವಲ್ಲದೆ, ನಾನು ಪೆರಿಯಾರ್​ ರಾಮಸ್ವಾಮಿ ಅಯ್ಯರ್​ ಹಾಗೂ ಬಿ.ಆರ್​. ಅಂಬೇಡ್ಕರ್​ ಅವರ ಅನಿಯಾಯಿಯಾಗಿದ್ದು, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೆನೆಂದು ಹೇಳಿಕೆ ನೀಡಿದ್ದಾರೆ.

ಸ್ಟಾಲಿನ್​ ಪುತ್ರ ಹೇಳಿದ್ದೇನು?

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಪುತ್ರ ಹಾಗೂ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್​, ಈ ಸನಾತನ ಎನ್ನುವುದು ಜನರನ್ನು ಒಡೆಯುತ್ತದೆ, ಹೀಗಾಗಿ ಇದನ್ನು ನಿರ್ಮೂಲನೆ ಮಾಡಬೇಕೆಂದು ತಿಮಿಳುನಾಡು ಸಂಸತ್ತಿನಲ್ಲಿ ಅವರು ಹೇಳಿದ್ದರು.

ಬಿಜೆಪಿಯಿಂದ ಭಾರಿ ವಿರೋಧ!

ಯುದಯನಿಧಿ ಸ್ಟಾಲಿನ್​ ಹೇಳಿಕೆಗೆ ಹಾಗೂ ಟಿವಿಕೆ ಎಂಎಲ್​ಎ ವಿಎಮ್​ಎಸ್​ ಮುಸ್ತಫಾ ಅವರ ಬೆಂಬಲಕ್ಕೆ, ಭಾರತೀಯ ಜನತಾ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಬಿಜೆಪಿ ನಾಯಕ ನಾರಾಯಣ ತಿರುಪತಿ, ಮುಸ್ತಫಾ ಈ ರೀತಿಯ ಹೇಳಿಕೆಯನ್ನು ಇಸ್ಲಾಂ ಹಾಗೂ ಕ್ರಿಶ್ಚಿಯನ್​ ಧರ್ಮವನ್ನು ಸೇರಿಸಿಕೊಂಡು ಹೇಳು, ಅದನ್ನು ಬಿಟ್ಟು ಕೇವಲ ಹಿಂದೂ ಧರ್ಮವನ್ನು ಗುರಿ ಮಾಡುವುದು ತಪ್ಪು, ಇವನು ಸನಾತನಿಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದಾನೆಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಾಗೆಯೇ ಇತರ ಬಿಜೆಪಿ ನಾಯಕರು, ಉದಯನಿಧಿ ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿದಾಗ ಸಿಎಂ ವಿಜಯ್​ ಏಕೆ ಮೌನ ವಹಿಸಿದ್ದರು? ಯಾಕೆ ಇವರಿಗೆ ಹಿಂದೂಗಳು ಮತ ಹಾಕಿಲ್ಲವೆ? ಈಗ ಇವರ ಪಕ್ಷದ ಎಂಎಲ್​ಎ ಸಹ ಇದೇ ಕೆಲಸವನ್ನು ಮಾಡಿದ್ದಾನೆ. ವಿಜಯ್​ ಏನು ಕ್ರಮ ತೆಗದುಕೊಳ್ಳುತ್ತಾನೆಂದು ನೋಡೊಣ ಎಂದು ಹೇಳಿದ್ದಾರೆ,

[t4b-ticker]
error: Content is protected !!