ಒಂದು ವರ್ಷ ಗೋಲ್ಡ್ ಮರೆತುಬಿಡಿ ಎಂದ ಪ್ರಧಾನಿ! ಅತ್ತ ನಿಜವಾಯ್ತು ಬಾಬಾ ವಂಗಾ ನುಡಿದ ‘ಚಿನ್ನ’ದ ಭವಿಷ್ಯ?

Picture of Savistara

Savistara

Bureau Report

Baba Vanga: ಇಸ್ರೇಲ್-ಅಮೆರಿಕ ಮತ್ತು ಇರಾನ್ನಡುವಿನ ಯುದ್ಧದಿಂದ ಚಿನ್ನದ ಬೆಲೆಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಪ್ರಸ್ತುತ, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1.52 ಲಕ್ಷ ರೂ.ಗಳಷ್ಟಿದೆ. ಮದುವೆ ಶುಭ ಕಾರ್ಯಗಳ ಸೀಸನ್‌ನಲ್ಲಿ ಹೇಗಪ್ಪ ಚಿನ್ನ ಕೊಳ್ಳುವುದು ಎಂದು ಜನರು ಚಿಂತಿಸುತ್ತಿರುವ ಸಮಯಕ್ಕೆ ಪ್ರಧಾನಿ ಮೋದಿ ಅವರ ಕಿವಿಮಾತು ಸದ್ಯ ದೇಶದ ಜನತೆಯನ್ನು ಅಕ್ಷರಶಃ ಬೆರಗಾಗಿಸಿದೆ.

ಒಂದು ವರ್ಷದ ಮಟ್ಟಿಗೆ ಅನಗತ್ಯವಾಗಿ ಚಿನ್ನವನ್ನು ಖರೀದಿಸಬೇಡಿ. ಮನೆಯಿಂದಲೇ ಕೆಲಸ ಮತ್ತು ವರ್ಚುವಲ್ ಸಭೆಗಳನ್ನು ಸಾಧ್ಯವಾದಷ್ಟು ಮಾಡಿ.ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ, ಏರುತ್ತಿರುವ ತೈಲಬೆಲೆಗಳು ಮತ್ತು ಉದಯೋನ್ಮುಖ ಆರೋಗ್ಯ ವಿಪತ್ತುಗಳ ಹಿನ್ನೆಲೆಯಲ್ಲಿ ಪ್ರಪಂಚ ಭಯದ ಭೀತಿಯಲ್ಲಿ ಬದುಕುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್-ಡಿಸೇಲ್ ಅನ್ನು ಮಿತವಾಗಿ ಬಳಸಿ, ಸುಖಾಸುಮ್ಮನೆ ಚಿನ್ನವನ್ನು ಕೊಳ್ಳಲು ಮುಂದಾಗಬೇಡಿ ಎಂದಿದ್ದಾರೆ. ಮತ್ತೊಂದೆಡೆ, 10 ಗ್ರಾಂ ಗೋಲ್ಡ್ ಶೀಘ್ರವೇ 2.25 ಲಕ್ಷ ರೂ. ಆಗಲಿದೆ ಎಂದು ಮೂಲಗಳು ಅಂದಾಜಿಸಿವೆ.ಮಧ್ಯಪ್ರಾಚ್ಯ ಸ್ಥಿತಿ ಮತ್ತು ಪ್ರಧಾನಿ ಮೋದಿ ಅವರ ಮಾತುಗಳು ಒಂದೆಡೆಯಾದರೆ, ಅತ್ತ ಪ್ರವಾದಿ ಬಾಬಾ ವಂಗಾ ಅವರು 2026ರಲ್ಲಿ ಇಂತಹ ದುರಂತ ಪರಿಸ್ಥಿತಿಯನ್ನು ಮೊದಲೇ ಊಹಿಸಿದ್ದರು ಎಂದು ಹೇಳುವ ಅನೇಕ ವರದಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ವರ್ಷ ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತದೆ ಎಂದು ವಂಗಾ ತಮ್ಮ ಭವಿಷ್ಯವಾಣಿಗಳಲ್ಲಿ ಇದನ್ನೂ ಸೇರಿಸಿದ್ದರು ಮತ್ತು ಜನರಿಗೆ ಮುನ್ಸೂಚನೆ ನೀಡಿದ್ದರು.

ಸಾಮಾನ್ಯವಾಗಿ, ಜನರು ಆರ್ಥಿಕತೆ ಅಥವಾ ಬ್ಯಾಂಕುಗಳ ದಿವಾಳಿಯಿಂದ, ತಮ್ಮ ಹಣವನ್ನು ಉಳಿಸಿಕೊಳ್ಳಲು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತಾರೆ. ಭವಿಷ್ಯದಲ್ಲಿ ಚಿನ್ನವೊಂದು ಸುರಕ್ಷಿತ ಆಸ್ತಿ ಎಂಬುದು ತಿಳಿದಿದೆ. ಜಾಗತಿಕ ಪರಿಸ್ಥಿತಿ ಹದಗೆಟ್ಟರೆ, ಚಿನ್ನದ ಬೆಲೆಗಳು ಶೇ.25ರಿಂದ ಶೇ.40ರಷ್ಟು ಏರಿಕೆಯಾಗಬಹುದು ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಹಾಗಿದ್ದಲ್ಲಿ, ಭಾರತದಲ್ಲಿ ಚಿನ್ನದ ಬೆಲೆ 1.9 ಲಕ್ಷದಿಂದ 2.25 ಲಕ್ಷ ರೂ.ಗೆ ತಲುಪುವ ಸಾಧ್ಯತೆಗಳಿದ್ದು, ಇದು ಹೊಸ ದಾಖಲೆಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸಲಾಗಿದೆ.ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ, 2026ರಲ್ಲಿ ಜಗತ್ತು ದೊಡ್ಡ ನಗದು ಬಿಕ್ಕಟ್ಟನ್ನು ಎದುರಿಸಲಿದೆ. ಬ್ಯಾಂಕ್‌ ಪೇಪರ್‌ಗಳು ಮತ್ತು ಪೇಪರ್ ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಚಿನ್ನ ಮತ್ತು ಬೆಳ್ಳಿ ಮಾತ್ರ ಜನರಿಗೆ ಸುರಕ್ಷಿತ ತಾಣವಾಗಿ ಬದಲಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಮಾತಿನಂತೆಯೇ, ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದ ಚಿನ್ನದ ಬೆಲೆ ದುಪ್ಪಟ್ಟಾಗಿದೆ,

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!