ರಾಜ್ಯ ಸರಕಾರವು ಸಾರಿಗೆ ಸಂಸ್ಥೆಗಳ ನೌಕರರು, ಅಧಿ ಕಾರಿಗಳಿಗೆ 2025ರ ಏ.1ರಿಂದ ಜಾರಿಗೆ ಬರುವಂತೆ ಶೇ. 12.50ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು 2025ರ ಮಾ.31ರಂದು ಪಡೆಯುತ್ತಿದ್ದ ಮೂಲ
ವೇತನವನ್ನು ಶೇ. 12.50ರಷ್ಟು ಹೆಚ್ಚಿಸಿ, ಅದರಂತೆ ಪರಿಷ್ಕರಣೆಯು 2026ರ ಜುಲೈ 1ರ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸಲು ಸರಕಾರ ಅನುಮೋದನೆ ನೀಡಿದೆ.2025ರ ಏ.1 ರಿಂದ 2026ರ ಜೂ.30ರ ಅವಧಿಯ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ-ಹಂತವಾಗಿ
ಪಾವತಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ಈ ವೇತನ ಪರಿಷ್ಕರಣೆಯಿಂದ 1.05 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಈಗಾಗಲೇ 2021ರ ಜ.1 ರಿಂದ 2023ರ ಫೆ.28ರವರೆಗಿನ 26 ತಿಂಗಳ ವೇತನ ಹಿಂಬಾಕಿಯ 1,271.92 ಕೋಟಿ ರೂ. ಪೈಕಿ ಮೊದಲ ಕಂತಿನಲ್ಲಿ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ.













































