ಒಡೆದ ಮನೆಯಾಯಿತೇ ಕೇರಳ ಕಾಂಗ್ರೆಸ್‌? ರಾಹುಲ್ ಗಾಂಧಿ ಫೋನ್ ಮಾಡಿದರೂ ತಣ್ಣಗಾಗದ ಸಿಟ್ಟು! ಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಚೆನ್ನಿತ್ತಲ ಗರಂ!

Picture of Savistara

Savistara

Bureau Report

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿದ ಸಂಭ್ರಮದಲ್ಲಿದ್ದ ಕಾಂಗ್ರೆಸ್‌ಗೆ ಈಗ ನಾಯಕತ್ವದ ಆಯ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ವಿ.ಡಿ. ಸತೀಶನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದ ಬೆನ್ನಲ್ಲೇ, ಹಿರಿಯ ನಾಯಕ ರಮೇಶ್ ಚೆನ್ನಿತ್ತಲ (Ramesh Chennithala) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಮೈತ್ರಿಕೂಟದ ವಿಜಯೋತ್ಸವದ ನಡುವೆಯೇ ಆತಂಕದ ಛಾಯೆ ಮೂಡಿಸಿದೆ.

ರಾಹುಲ್ ಗಾಂಧಿ ಕರೆ ಮಾಡಿದರೂ ತಣ್ಣಗಾಗದ ಸಿಟ್ಟು!

ಮೂಲಗಳ ಪ್ರಕಾರ, ವಿ.ಡಿ. ಸತೀಶನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಿಸಿದ ನಂತರ ಹೈಕಮಾಂಡ್ ಸೂಚನೆಯಂತೆ ರಾಹುಲ್ ಗಾಂಧಿ ಅವರು ಚೆನ್ನಿತ್ತಲ ಅವರಿಗೆ ಫೋನ್ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ. ಅದರೆ, ಚೆನ್ನಿತ್ತಲ ಅವರು ತಮ್ಮ ಅಸಮಾಧಾನವನ್ನು ಕಡಿಮೆ ಮಾಡಿಕೊಂಡಿಲ್ಲ ಎನ್ನಲಾಗಿದೆ. ಹಿರಿಯ ನಾಯಕರನ್ನು ಕಡೆಗಣಿಸಿ ಕಿರಿಯರಿಗೆ ಪಟ್ಟ ನೀಡಿರುವುದು ಅವರಿಗೆ ಬೇಸರ ತಂದಿದೆ ಎಂದು ಹೇಳಲಾಗುತ್ತಿದೆ.

ಸಚಿವ ಸಂಪುಟಕ್ಕೆ ‘ನೋ’ ಎಂದ ಚೆನ್ನಿತ್ತಲ..?

ರಮೇಶ್ ಚೆನ್ನಿತ್ತಲ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ ಮತ್ತು ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಸಚಿವ ಸಂಪುಟವನ್ನು ಸೇರುವ ಯಾವುದೇ ಉದ್ದೇಶ ಅವರಿಗಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಹಿರಿತನಕ್ಕೆ ಬೆಲೆ ಸಿಕ್ಕಿಲ್ಲ ಎಂಬುದು ಅವರ ಮುಖ್ಯ ಆರೋಪವಾಗಿದೆ. ಆದರೆ, ಅವರ ಅಧಿಕೃತ ವಕ್ತಾರರು ಇಂತಹ ವರದಿಗಳನ್ನು ನಿರಾಕರಿಸಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಗೌರವ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಹೇಗಿತ್ತು ಆಯ್ಕೆಯ ಪ್ರಕ್ರಿಯೆ..?

ಮೇ 7 ರಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆಯ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲಾಗಿತ್ತು.

ಚರ್ಚೆಗಳು: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕೇರಳದ ಉಸ್ತುವಾರಿ ದೀಪಾ ದಾಸ್ ಮುನ್ಶಿ ಅವರು ಶಾಸಕರ ಅಭಿಪ್ರಾಯ ಪಡೆದು ಈ ತೀರ್ಮಾನಕ್ಕೆ ಬಂದಿದ್ದಾರೆ.

ಪೈಪೋಟಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಸತೀಶನ್, ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಯುವ ಮುಖವಾಗಿರುವ ಸತೀಶನ್ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ.

ಪ್ರಮಾಣವಚನ ಸ್ವೀಕಾರ ಯಾವಾಗ..?

ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಶಿ ಅವರು ಶೀಘ್ರದಲ್ಲೇ ಕೇರಳಕ್ಕೆ ಭೇಟಿ ನೀಡಿ, ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರದ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ. ಆದರೆ ಚೆನ್ನಿತ್ತಲ ಅವರ ಅಸಮಾಧಾನವನ್ನು ಶಮನಗೊಳಿಸದಿದ್ದರೆ, ಸರ್ಕಾರದ ಆರಂಭಿಕ ದಿನಗಳಲ್ಲೇ ಕಾಂಗ್ರೆಸ್ ಮುಖಭಂಗ ಅನುಭವಿಸುವ ಸಾಧ್ಯತೆಯಿದೆ,

[t4b-ticker]
error: Content is protected !!