ಆದಾಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ‘ನಂಬರ್‌ ಒನ್’ ಸ್ಥಾನ: ₹167.89 ಕೋಟಿ ಆದಾಯ

Picture of Savistara

Savistara

Bureau Report

ಸುಬ್ರಹ್ಮಣ್ಯ ಮೇ 11: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲವು 2025-26ನೇ ಸಾಲಿನಲ್ಲೂ ರಾಜ್ಯದ ಅತಿ ಹೆಚ್ಚು ಆದಾಯ ಗಳಿಸುವ ದೇವಾಲಯ ಎಂಬ ಹೆಗ್ಗಳಿಕೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಈ ಮೂಲಕ ಸತತ 14 ವರ್ಷಗಳಿಂದ ರಾಜ್ಯದ ಶ್ರೀಮಂತ ದೇಗುಲ ಎಂಬ ಸ್ಥಾನವನ್ನು ಕಾಯ್ದುಕೊಂಡಿದೆ.

ಮುಜರಾಯಿ ಇಲಾಖೆ ಬಿಡುಗಡೆ ಮಾಡಿರುವ 2025-26ನೇ ಸಾಲಿನ ಆದಾಯ ಪಟ್ಟಿಯ ಪ್ರಕಾರ, ಕ್ಷೇತ್ರವು ಬರೋಬ್ಬರಿ ₹167.89 ಕೋಟಿ ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಕಳೆದ 2024-25ನೇ ಆರ್ಥಿಕ ವರ್ಷದಲ್ಲಿ ದೇಗುಲವು ₹156 ಕೋಟಿ ಆದಾಯ ಗಳಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆದಾಯದಲ್ಲಿ ಸುಮಾರು ₹12 ಕೋಟಿ ಏರಿಕೆಯಾಗಿದೆ.

ದೇವಸ್ಥಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆದಾಯವು ₹168 ಕೋಟಿಯ ಗಡಿ ತಲುಪಿದೆ. ಸೇವಾ ಶುಲ್ಕ, ಕಾಣಿಕೆ ಡಬ್ಬಿ, ಹರಕೆ ವಸ್ತುಗಳು ಸೇರಿದಂತೆ ವಿವಿಧ ಮೂಲಗಳಿಂದ ಈ ಆದಾಯ ಹರಿದುಬಂದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಗೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಈ ಆದಾಯ ಏರಿಕೆಗೆ ಪ್ರಮುಖ ಕಾರಣವಾಗಿದೆ.

[t4b-ticker]
error: Content is protected !!