ಮಿತವ್ಯಯಕ್ಕೆ ಪ್ರಧಾನಿ ಮೋದಿ ಫಸ್ಟ್ ಸ್ಟೆಪ್, ಶೇ.50ರಷ್ಟು ಬೆಂಗಾವಲು ಪಡೆಗೆ ಕತ್ತರಿ

Picture of Savistara

Savistara

Bureau Report

ಯುದ್ಧ ಹಾಗೂ ಅನಿಶ್ಚಿತತೆಗಳ ನಡುವೆ ಪ್ರಧಾನಿ ಮೋದಿ ದೇಶದ ಜನತೆಗೆ ಕೆಲ ಸಲಹೆಗಳನ್ನು ನೀಡಿದ್ದರು. ಅದೇ ಸಲಹೆಗಳನ್ನು ತಾನೂ ಫಾಲೋ ಮಾಡಿ ಜನರಿಗೆ ಮಾದರಿಯಾಗಿದ್ದಾರೆ.ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ, ಮಿತವಾಗಿ ಇಂಧನ ಬಳಕೆ ಮಾಡಿ ಎಂದು ಪ್ರಧಾನಿ ಹೇಳಿದ್ದರು. ಇದೀಗ ಬದಲಾವಣೆ ತಮ್ಮಿಂದಲೇ ಆಗಲಿ ಎಂದು ಪ್ರಧಾನಿ ತಮ್ಮ ಬೆಂಗಾವಲು ವಾಹನಗಳಿಗೆ ಕತ್ತರಿ ಹಾಕಿದ್ದಾರೆ.

ಎಸ್‌ಪಿಜಿ ಭದ್ರತಾ ಪಡೆಗೆ ನಿಯೋಜನೆಗೊಳ್ಳುವ ವಾಹನಗಳ ಸಂಖ್ಯೆಯಲ್ಲಿ ಕಡಿತ ಹಾಗೂ ಪೆಟ್ರೋಲ್, ಡಿಸೆಲ್ ವಾಹನಗಳ ಬದಲು ಎಲೆಕ್ಟಿಕ್ ವಾಹನಗಳಿಗೆ ಪ್ರಧಾನಿ ಕಚೇರಿ ಸೂಚನೆ ನೀಡಿದೆ. ಪ್ರಧಾನಿಯ ಬೆಂಗಾವಲು ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ. ಇನ್ನು ಇದೇ ರೀತಿ ಮಾಡುವಂತೆ ಕೇಂದ್ರ ಸಚಿವರು ಹಾಗೂ ಎನ್‌ಡಿಎ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!