ಬೆಂಗಳೂರು: ‘ದೇಶದ ಹಿತ ದೃಷ್ಟಿಯಿಂದ ಒಂದು ವರ್ಷಗಳ ಚಿನ್ನವನ್ನು ಖರೀದಿಸಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಬೆನ್ನಲ್ಲೇ, ಪ್ರಧಾನಿ ಇಂದಿರಾ ಗಾಂಧಿಯವರೂ ಚಿನ್ನ ಖರೀದಿಸದಂತೆ ಮನವಿ ಮಾಡಿದ್ದರು ಎನ್ನುವ ‘ದಿ ಹಿಂದೂ’ ಪತ್ರಿಕೆಯ ಮುಖಪುಟದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ, ‘ದಿ ಹಿಂದೂ’ ಪತ್ರಿಕೆಯಲ್ಲಿ 1967 ರ ಜೂನ್ 6 ರಂದು ಅಂತಹ ಸುದ್ದಿ ಪ್ರಕಟವಾಗಿಯೇ ಇಲ್ಲ. ಹರಿದಾಡುತ್ತಿರುವ ಮುಖಪುಟದ ಚಿತ್ರ ನಕಲಿ ಎಂದು ಸುದ್ದಿ ಸಂಸ್ಥೆ ಸ್ಪಷ್ಟನೆ ನೀಡಿದೆ.ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸ್ಥೆ, ‘1967 ಜೂನ್ 6,ರಂದು ‘ದಿ ಹಿಂದೂ’ ಪತ್ರಿಕೆಯ ಮುಖಪುಟ ಎಂದು ಹೇಳಲಾದ ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾದ ಚಿತ್ರವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ನಮ್ಮ ಆರ್ಕೈವ್‌ಗಳಿಂದ ಬಂದ ಅಧಿಕೃತ ಪುಟವಲ್ಲ. ‘ದಿ ಹಿಂದೂ’ ಓದುಗರು ಪತ್ರಿಕೆಯ ಪುಟಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆಯಿಂದಿರಬೇಕು’ ಎಂದು ಹೇಳಿದೆ.
ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು 1967 ರ ಜೂನ್ 6 ರಂದು ‘ದಿ ಹಿಂದೂ’ವಿನಲ್ಲಿ ಪ್ರಕಟಗೊಂಡ ಮುಖಪುಟವನ್ನೂ ಹಂಚಿಕೊಂಡಿದ್ದಾರೆ.













































