ವರ್ಕ್ ಪ್ರಂ ಹೋಮ್ ಮಾತ್ರವಲ್ಲ, ಆನ್‌ಲೈನ್‌ನಲ್ಲೇ ತರಗತಿಗಳ ನಡೆಸಲು ಮೋದಿ ಸಲಹೆ

Picture of Savistara

Savistara

Bureau Report

ವಡೋದರಾ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನಪೂರೈಕೆ ಸರಪಳಿಗೆ ಅಡ್ಡಿಯಾಗಿರುವುದರಿಂದ ತೈಲ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಲು ಶಾಲೆಗಳಲ್ಲೂ ತಾತ್ಕಾಲಿಕವಾಗಿ ಆನ್‌ಲೈನ್ ತರಗತಿಗಳನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಮನೆಯಿಂದಲೇ ಕೆಲಸ, ಕಾರ್ ಪೂಲಿಂಗ್ ಹಾಗೂ ವರ್ಚುವಲ್ ಸಭೆಗಳನ್ನು ಅಳವಡಿಸಿಕೊಳುವಂತೆಯೂ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.ಸೋಮವಾರ ಗುಜರಾತ್‌ ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಅಂತರರಾಷ್ಟ್ರೀಯ ಬಿಕ್ಕಟ್ಟಿನಿಂದಾಗಿ ದೇಶದ ಆರ್ಥಿಕತೆ ಹಾಗೂ ಇಂಧನ ಸಂಪನ್ಮೂಲಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.’ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ಸ್ವಲ್ಪ ಸಮಯದವರೆಗೆ ಪರಿಗಣಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಪೆಟ್ರೋಲ್-ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿನಂತಿ ಮಾಡುತ್ತೇನೆ. ಮೆಟ್ರೊ, ಎಲೆಕ್ಟಿಕ್ ಬಸ್ ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ. ಕಾರು ಪೂಲಿಂಗ್ ಉತ್ತೇಜಿಸಿ’ ಎಂದು ಹೇಳಿದ್ದಾರೆ.’ಡಿಜಿಟಲ್ ತಂತ್ರಜ್ಞಾನವು ಅನೇಕ ವಿಷಯಗಳನ್ನು ಸರಳೀಕರಣಗೊಳಿಸಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ವರ್ಚುವಲ್ ಸಭೆಗಳು, ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡುವುದು ಅಗತ್ಯ’ ಎಂದು ಸಲಹೆ ನೀಡಿದ್ದಾರೆ.’ವಿದೇಶಿ ವಸ್ತುಗಳ ಬದಲು ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಬೇಕಿದೆ. ‘ವೋಕಲ್ ಫಾರ್ ಲೋಕಲ್’ ಅಂದೋಲನ ಈಗ ತುರ್ತು ಅಗತ್ಯವಾಗಿದೆ’ ಎಂದು ತಿಳಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!