ಸುಳ್ಯದ ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸುಮಾರು74 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಾತಾ ಸಭಾಭವನದ ಲೋಕಾರ್ಪಣೆ ಸಮಾರಂಭ ಮೇ.14ರಂದು ನಡೆಯಿತು. ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು ಸಭಾಭವನವನ್ನು ಲೋಕಾರ್ಪಣೆ ಮಾಡಿದರು.

ಬಳಿಕ ಸಭಾಭವನದ ಒಳಗೆ ದೀಪಪ್ರಜ್ವಲನೆಗೊಳಿಸಿದರು.ಈ ಸಂದರ್ಭದಲ್ಲಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಕು.ಭಾಗೀರಥಿ ಮುರುಳ್ಯ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರಿ ಶ್ರೀಮತಿ ಉಮಾದೇವಿ ಮುಖ್ಯ ಅತಿಥಿಗಳಾಗಿದ್ದರು. ಮಹಿಷಮರ್ದಿನೀ ಸೇವಾ ಟ್ರಸ್ಟ್ ಅಧ್ಯಕ್ಷ ಶಿವರಾಯ ಬಯಂಬು, ಕಾರ್ಯದರ್ಶಿ ಭಾಸ್ಕರ ರಾವ್ ಬಯಂಬು, ಸಭಾಭವನ ಲೋಕಾರ್ಪಣಾ ಸಮಿತಿ ಪ್ರಧಾನ ಸಂಚಾಲಕ ಸುಭೋದ್ ಶೆಟ್ಟಿ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.













































