ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲಿನ ವಿವಾದ ಮತ್ತೆ ಭುಗಿಲೆದ್ದಿದ್ದು, ಸಿಎಂ ಸಿದ್ದರಾಮಯ್ಯ ತಮ್ಮನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಶಾಲೆಗಳಿಗೆ ಕೇಸರಿ ಶಾಲು ಅಷ್ಟೇ ಅಲ್ಲ, ಕೇಸರಿ ಪೇಟ ಕೂಡ ಹಾಕಿಕೊಂಡು ಬರಲು ಅವಕಾಶ ಇಲ್ಲ ಎಂದು ಸಿಎಂ ಹೇಳಿದ್ದಾರೆ.ಈ ಮೊದಲು ಯಾವುದಕ್ಕೆಲ್ಲಾ ಅವಕಾಶ ಇತ್ತೋ ಅದನ್ನು ಕೊಟ್ಟಿದ್ದೇವೆ. ಈ ಹಿಂದೆ ಬೇರೆ ಬಣ್ಣದ ಪೇಟ ಹಾಕೋರು. ಅದಕ್ಕೆ ಅವಕಾಶ ಇದೆ. ಈಗ ಕೇಸರಿ ಪೇಟ ಹಾಕಿಕೊಂಡು ಬರೋದಕ್ಕೆ ಅವಕಾಶ ಕೊಡೋದಕ್ಕೆ ಆಗೋದಿಲ್ಲ. ಬರೀ ಹಿಜಾಬ್‌ಗೆ ಅಷ್ಟೇ ಪರ್ಮಿಷನ್ ಕೊಟ್ಟಿಲ್ಲ. ಶಿವನ ದಾರ, ಜನಿವಾರ, ಬೇರೆ ಬಣ್ಣದ ಪೇಟಗಳನ್ನು ಹಾಕಬಹುದು ಎಂದಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಬಿಟ್ಟು ಬೇರೇನೂ ಹಾಕಬಾರದು ಎಂದು ಹೇಳಿತ್ತು. ಈ ಆದೇಶವನ್ನು ಈಗಿನ ಸರ್ಕಾರ ತೆಗೆದುಹಾಕಿದ್ದು, ಹಿಜಾಬ್‌ಗೆ ಅವಕಾಶ ಕೊಟ್ಟಿದೆ. ಆದರೆ ಕೇಸರಿ ಶಾಲು ಧರಿಸೋದಕ್ಕೆ ಅವಕಾಶ ಇಲ್ಲ ಎಂದಿದೆ. ಇದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ.













































