ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ದಳಪತಿ ವಿಜಯ್; ನೂತನ ಟಿವಿಕೆ ಸರ್ಕಾರಕ್ಕೆ 144 ಶಾಸಕರ ಬೆಂಬಲ

Picture of Savistara

Savistara

Bureau Report

ಚೆನ್ನೈ: ತಮಿಳುನಾಡಿನಲ್ಲಿ ನೂತನವಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದ ಸೂಪರ್ ಸ್ಟಾರ್ ದಳಪತಿ ವಿಜಯ್, ಇಂದು(ಮೇ 13) ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸಿದ್ದು, ವಿಪಕ್ಷ ಎಐಎಡಿಎಂಕೆಯ 25 ಶಾಸಕರು ಸೇರಿ ಒಟ್ಟು 144 ಶಾಸಕರ ಬೆಂಬಲ ನೂತನ ಟಿವಿಕೆ ಸರ್ಕಾರಕ್ಕೆ ಸಿಕ್ಕಿದೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ಬೆಳಗ್ಗೆ ಸಿಎಂ ವಿಜಯ್ ಅವರು ವಿಶ್ವಾಸಮತ ಯಾಚನೆಯನ್ನು ಮಂಡಿಸಿದರು. ಮ್ಯಾಜಿಕ್ ನಂಬರ್ 118. ವಿಶ್ವಮತಯಾಚನೆಯನ್ನು ಬಹಿಷ್ಕರಿಸಿ ಡಿಎಂಕೆ ಮತ್ತು ಡಿಎಂಡಿಕೆ ಸಭತ್ಯಾಗ ಮಾಡಿದರು. ಮತ್ತು ಪಿಎಂಕೆಯ ನಾಲ್ವರು ಮತ್ತು ಬಿಜೆಪಿಯ ಓರ್ವ ಶಾಸಕ ಮತದಾನದಿಂದ ದೂರ ಉಳಿದರು. ಇದರಿಂದ ಸದನದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಯಿತು ಮತ್ತು ಮ್ಯಾಜಿಕ್ ನಂಬರ್ ಸಹ ಕಡಿಮೆಯಾಗಿ ಸುಲಭವಾಗಿ ವಿಜಯ್ ವಿಶ್ವಾಸಮತ ಗೆದ್ದಿದ್ದಾರೆ.

ಧ್ವನಿ ಮತದ ಬದಲು, ಸ್ಪೀಕರ್ ಶಾಸಕರ ತಲೆ ಎಣಿಸಿದ್ದು, ವಿಪಕ್ಷಗಳ ಖಾಲಿ ಸ್ಥಾನಗಳ ನಡುವೆ ಎಐಎಡಿಎಂಕೆ 25 ಶಾಸಕರ ಬೆಂಬಲ ಮತ್ತು ಕಾಂಗ್ರೆಸ್ 5, ಸಿಪಿಐ 2, ಸಿಪಿಎಂ 2, ವಿಸಿಕೆ 2, ಮುಸ್ಲಿಂ ಲೀಗ್ 2 ಹಾಗೂ ಓರ್ವ ಎಎಂಎಂಕೆ ಸೇರಿ ಒಟ್ಟು 144 ಶಾಸಕರು ಟಿವಿಕೆ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. 22 ಶಾಸಕರು ವಿರುದ್ಧ ಮತಚಲಾಯಿಸಿದರು.ಈ ವೇಳೆ ಮಾತನಾಡಿರುವ ಸಿಎಂ ವಿಜಯ್, ತಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ ಜನರಿಗೆ ಧನ್ಯವಾದ ಅರ್ಪಿಸಿದದ ಅವರು, ತಮ್ಮ ಸರ್ಕಾರದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಲಿವೆ. ಎಲ್ಲಾ ವರ್ಗಗಳು ನಮ್ಮ ಮೇಲೆ ನಂಬಿಕೆ ಇಟ್ಟಿವೆ ಎಂದು ಹೇಳಿದ್ದಾರೆ.

[t4b-ticker]
error: Content is protected !!