ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವಂತ ಗಣ್ಯರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. 70ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ 70 ಮಂದಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ರು, ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದಿದೆ.
ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದ್ದು, ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಸಚಿವ ಶಿವರಾಜ ತಂಡರಗಿ ತಿಳಿಸಿದ್ದಾರೆ.
ಪ್ರಶಸ್ತಿ ನೀಡಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 12 ಮಂದಿ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಹೀಗಿದೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಾಹಿತ್ಯ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ, ತುಂಬಾಡಿ ರಾಮಯ್ಯ, ತುಮಕೂರು, ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ, ಡಾ.ಎಚ್.ಎಲ್ ಪುಷ್ಪ ತುಮಕೂರು, ರಹಮತ್ ತರೀಕೆರೆ ಚಿಕ್ಕಮಗಳೂರು, ಹ.ಮ. ಪೂಜಾರ ವಿಜಯಪುರ,
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ, ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ, ಹನುಮಂತಪ್ಪ, ಮಾರಪ್ಪ ಚೀಳಂಗಿ, ಚಿತ್ರದುರ್ಗ, ಎಂ. ತೋಪಣ್ಣ ಕೋಲಾರ, ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ, ಸಿಂಧು ಗುಜರನ್ ದಕ್ಷಿಣ ಕನ್ನಡ, ಎಲ್. ಮಹದೇವಪ್ಪ ಉಡಿಗಾಲ ಮೈಸೂರು,
ಸಂಗೀತ
ದೇವೆಂದ್ರಕುಮಾರ ಪತ್ತಾರ್ ಕೊಪ್ಪಳ, ಮಡಿವಾಳಯ್ಯ ಸಾಲಿ, ಬೀದ
ನೃತ್ಯ
ಪ್ರೊ. ಕೆ. ರಾಮಮೂರ್ತಿ ರಾವ್, ಮೈಸೂರು
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್, ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್, ಕೊಡಗು
ಆಡಳಿತ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ), ಬೆಂಗಳೂರು ದಕ್ಷಿಣ (ರಾಮನಗರ)ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ), ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
ಡಾ. ಆಲಮ್ಮ ಮಾರಣ್ಣ, ತುಮಕೂರುಡಾ. ಜಯರಂಗನಾಥ್, ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
ಸೂಲಗಿತ್ತಿ ಈರಮ್ಮ, ವಿಜಯನಗರಫಕ್ಕೀರಿ, ಬೆಂಗಳೂರು ಗ್ರಾಮಾಂತರಕೋರಿನ್ ಆಂಟೊನಿಯಟ್ ರಸ್ಕೀನಾ, ದಕ್ಷಿಣ ಕನ್ನಡಡಾ. ಎನ್. ಸೀತಾರಾಮ ಶೆಟ್ಟಿ, ಉಡುಪಿಕೋಣಂದೂರು ಲಿಂಗಪ್ಪ, ಶಿವಮೊಗ್ಗಉಮೇಶ ಪಂಬದ, ದಕ್ಷಿಣ ಕನ್ನಡಡಾ. ರವೀಂದ್ರ ಕೋರಿಶೆಟ್ಟಿರ್, ಧಾರವಾಡಕೆ.ದಿನೇಶ್, ಬೆಂಗಳೂರುಶಾಂತರಾಜು, ತುಮಕೂರುಜಾಫರ್ ಮೊಹಿಯುದ್ದೀನ್, ರಾಯಚೂರುಪೆನ್ನ ಓಬಳಯ್ಯ, ಬೆಂಗಳೂರು ಗ್ರಾಮಾಂತರಶಾಂತಿ ಬಾಯಿ, ಬಳ್ಳಾರಿಪುಂಡಲೀಕ ಶಾಸ್ತ್ರೀ(ಬುಡಬುಡಕೆ), ಬೆಳಗಾವಿ
ಹೊರನಾಡು/ ಹೊರದೇಶ
ಜಕರಿಯ ಬಜಪೆ (ಸೌದಿ), ಹೊರನಾಡು/ ಹೊರದೇಶಪಿ ವಿ ಶೆಟ್ಟಿ (ಮುಂಬೈ), ಹೊರನಾಡು/ ಹೊರದೇಶ
ಪರಿಸರ
ರಾಮೇಗೌಡ, ಚಾಮರಾಜನಗರಮಲ್ಲಿಕಾರ್ಜುನ ನಿಂಗಪ್ಪ, ಯಾದಗಿರಿ
ಕೃಷಿ
ಡಾ.ಎಸ್.ವಿ.ಹಿತ್ತಲಮನಿ, ಹಾವೇರಿಎಂ ಸಿ ರಂಗಸ್ವಾಮಿ, ಹಾಸನ
ಮಾಧ್ಯಮ
ಕೆ.ಸುಬ್ರಮಣ್ಯ, ಬೆಂಗಳೂರುಅಂಶಿ ಪ್ರಸನ್ನಕುಮಾರ್, ಮೈಸೂರುಬಿ.ಎಂ ಹನೀಫ್, ದಕ್ಷಿಣ ಕನ್ನಡಎಂ ಸಿದ್ಧರಾಜು, ಮಂಡ್ಯ
ವಿಜ್ಞಾನ ಮತ್ತು ತಂತ್ರಜ್ಞಾನ
ರಾಮಯ್ಯ, ಚಿಕ್ಕಬಳ್ಳಾಪುರಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್, ದಾವಣಗೆರೆಡಾ. ಆರ್. ವಿ ನಾಡಗೌಡ, ಗದಗ
ರಾಜ್ಯೋತ್ಸವ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನು ಒಳಗೊಂಡಿದೆ. ನವೆಂಬರ್.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಬೆಳಗ್ಗೆ 8.30ಗಂಟೆಗೆ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ.














































