ಬೆಳ್ಳಿ ರಥ ಯಾತ್ರೆಗೆ ಚಾಲನೆ: ಅದ್ದೂರಿ ಮೆರವಣಿಗೆಯಲ್ಲಿ ಯಾತ್ರೆ ಪ್ರಾರಂಭ,ದಾರಿಯುದ್ಧಕೂ ರಥಕ್ಕೆ ಸ್ವಾಗತ

ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಯಾತ್ರೆ ಕೋಟೇಶ್ವರದಿಂದ ಆರಂಭಗೊಂಡಿದೆ. ಸೋಮವಾರ ರಾತ್ರಿ ಗುತ್ತಿಪೂಜೆ ನಡೆದು ರಥವನ್ನು
ಶಾಸ್ರೋಕ್ತವಾಗಿ ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗೂ ಮನೆಯವರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆದಿತ್ತು.

ಇಂದು ಬೆಳಿಗ್ಗೆ ಬೆಳ್ಳಿ ರಥಯಾತ್ರೆ ಸುಳ್ಯದ ಕಡೆಗೆ ಪ್ರಯಾಣ ಆರಂಭಿಸಿದೆ. ರಥಯಾತ್ರೆಗೆ ಉಡುಪಿ, ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.ಶಾಸಕರಾದ ಕಿರಣ್ ಕೊಡ್ಗಿ, ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕೋಟೇಶ್ವರದ ರಥ ಶಿಲ್ಪಿ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ರಾಜಗೋಪಾಲಾಚಾರ್ಯ ಸೇರಿ ಹಲವು ಮಂದಿ ಪ್ರಮುಖರು ಉಪಸ್ಥಿತರಿದ್ದರು.













































