ಐಪಿಎಲ್‌: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್‌ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

Picture of Savistara

Savistara

Bureau Report

ಲಖನೌ: ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಅವರನ್ನು ತಮ್ಮ ಜಾಗತಿಕ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಿರುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾಗಿರುವ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಂಗಳವಾರ ಮಾಹಿತಿ ನೀಡಿದೆ.

60 ವರ್ಷದ ಟಾಮ್ ಮೂಡಿ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಎರಡು ಬಾರಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. 2022 ರಲ್ಲಿ ಸನ್‌ರೈಸರ್ಸ್‌ ತಂಡಕ್ಕೆ ಬ್ರಿಯಾನ್ ಲಾರಾ ಮುಖ್ಯ ಕೋಚ್ ಆದ ಬಳಿಕ ಮೂಡಿ ಫ್ರಾಂಚೈಸಿಯನ್ನು ತೊರೆದಿದ್ದರು.ಎಲ್‌ಎಸ್‌ಜಿ ತನ್ನ ಎಕ್ಸ್ ಖಾತೆಯಲ್ಲಿ, ‘ಅನುಭವ. ದೂರದೃಷ್ಟಿ. ನಾಯಕತ್ವ, ಸೂಪ‌ರ್ ಜೈಂಟ್ಸ್ ಯೂನಿವರ್ಸ್‌ಗೆ ಸ್ವಾಗತ ಟಾಮ್ ಮೂಡಿ!’ ಎಂಬ ಶೀರ್ಷಿಕೆಯೊಂದಿಗೆ ಮೂಡಿ ಅವರ ಭಾವಚಿತ್ರವನ್ನು ಪೋಸ್ಟ್ ಮಾಡಿದೆ.

ಟಾಮ್ ಮೂಡಿ ಅವರು ಆಸ್ಟ್ರೇಲಿಯಾ ಪರ 8 ಟೆಸ್ಟ್ ಮತ್ತು 76 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 1,667 ರನ್ ಗಳಿಸಿದ್ದಾರೆ ಮತ್ತು ಎರಡೂ ಸ್ವರೂಪಗಳಿಂದ 54 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!