ಅತ್ಯಾಚಾರಿ ಆಸಾರಾಂ ಬಾಪುಗೆ 6 ತಿಂಗಳ ಜಾಮೀನು

Picture of Savistara

Savistara

Bureau Report

ಅಹಮದಾಬಾದ್‌: 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆರು ತಿಂಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

ರಾಜಸ್ಥಾನ ಹೈಕೋರ್ಟ್‌ ಆಸಾರಾಂಗೆ ಜಾಮೀನು ಮಂಜೂರು ಮಾಡಿರುವ ಆದೇಶದ ಆಧಾರದ ಮೇಲೆ ಜಾಮೀನು ನೀಡುತ್ತಿರುವುದಾಗಿ ನ್ಯಾಯಮೂರ್ತಿ ಇಲೇಶ್ ವೋರಾ ಮತ್ತು ಆ‌ರ್.ಟಿ ವಚ್ಚಾನಿ ಅವರ ವಿಭಾಗೀಯ ಪೀಠವು ಮೌಖಿಕವಾಗಿ ತಿಳಿಸಿದೆ. ಸುಮಾರು ಒಂದು ವಾರದ ಹಿಂದೆಯಷ್ಟೆ ರಾಜಸ್ಥಾನ ಹೈಕೋರ್ಟ್ ಕೂಡಾ ಇದೇ ರೀತಿಯ ಆದೇಶನ್ನು ನೀಡಿತ್ತು.ರಾಜಸ್ಥಾನ ಹೈಕೋರ್ಟ್‌ನ ಆದೇಶವನ್ನು ಪೀಠದ ಮುಂದೆ ಸಲ್ಲಿಸಿದ ಆಸಾರಾಂ ಪರ ವಕೀಲರು, ತಮ್ಮ ಕಕ್ಷಿದಾರನ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸುವಂತೆ ಕೋರಿದ್ದರು. ರಾಜ್ಯ ಸರ್ಕಾರದ ಪರ ವಕೀಲರು ಈ ಅರ್ಜಿಯನ್ನು ವಿರೋಧಿಸಿ, ಜೋದ್‌ಪುರ ಜೈಲಿನಲ್ಲಿ ನೀಡಲು ಸಾಧ್ಯವಾಗದ ಚಿಕಿತ್ಸಾ ಸೌಲಭ್ಯಗಳನ್ನು, ಅಹಮದಾಬಾದ್‌ನ ಸಬರಮತಿ ಕೇಂದ್ರ ಜೈಲಿನಲ್ಲಿ ಆಸಾರಾಂಗೆ ಒದಗಿಸಬಹುದು ಎಂದು ಹೇಳಿದ್ದಾರೆ.2023ರ ಜನವರಿಯಲ್ಲಿ ಗಾಂಧಿನಗರದ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಆಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತ 2001ರಿಂದ 2006ರವರೆಗೆ ಅಹಮದಾಬಾದ್‌ ಮೊಟೇರಾದಲ್ಲಿರುವ ತನ್ನ ಆಶ್ರಮದಲ್ಲಿ ತನ್ನ ಶಿಷ್ಠೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಆತನ ವಿರುದ್ಧ 2013ರಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೆ, ರಾಜಸ್ಥಾನದ ತನ್ನ ಆಶ್ರಮದಲ್ಲಿ ಕೂಡ 2013ರ ವೇಳೆಗೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!