ಮಂಗಳೂರು: ಸಹಕಾರ ಕ್ಷೇತ್ರದಲ್ಲಿ ಕ್ಯಾಂಪ್ಕೋ ಸಂಸ್ಥೆಯಲಿ ಬಿಗಿ ಹಿಡಿತ ಹೊಂದಿರುವ ಸಂಘ ಪರಿವಾರಕ್ಕೆ ಈ ಬಾರಿ ಚುನಾವಣೆ ಅಗ್ನಿಪರೀಕ್ಷೆ ಎದುರಾಗಿದೆ. ಅನೇಕ ವರ್ಷಗಳಿಂದ ಒಮ್ಮತದಿಂದ ಅಭ್ಯರ್ಥಿ ಆಯ್ಕೆಗಳು ಅವಿರೋಧ ಆಯ್ಕೆ ನಡೆಯುತ್ತಿದ್ದು ಆದರೆ ಈ ಚುನಾವಣೆಯಲ್ಲಿ ಎಮ್ ಜಿ ಸತ್ಯನಾರಾಯಣ ಮತ್ತು ರಾಮಪ್ರತೀಕ್ ಸಿ ವರ್ಗದಲ್ಲಿ ಪರಿವಾರ ಸಂಘಟನೆ ಅಭ್ಯರ್ಥಿಗಳ ವಿರುದ್ದವಾಗಿ ಸ್ಪರ್ಧೆಸುತ್ತಿದ್ದಾರೆ. ಕೇರಳ ವಲಯದಿಂದ ಪರಿವಾರ ಸಂಘಟನೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಕರ್ನಾಟಕ ವಲಯದಿಂದ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಸಿ ವರ್ಗದಲ್ಲಿ ಪರಿವಾರ ಸಂಘಟನೆ ಕಡೆಯಿಂದ ಸತೀಶ್ ಚಂದ್ರ,ದಯಾನಂದ ಹೆಗ್ಡೆ, ಪುರೊಷೋತ್ತಮ ಭಟ್,ಮುರಳಿ ಕೃಷ್ಣ ಚಳ್ಳಂಗರು ಎ. ವಿ ತೀರ್ಥರಾಮ,ಮಹೇಶ್ ಚೌಟ ಕಣದಲ್ಲಿ ಉಳಿದಿದ್ದಾರೆ.ಸಂಘಟನೆಯ ಪ್ರಬಲ ನೆಲೆಯಾಗಿರುವ ಕ್ಯಾಂಪ್ಕೋ ಸಂಘ ಪ್ರಮುಖರು ಒಮ್ಮತ ಮೂಡಿಸುವಲ್ಲಿ ವಿಫಲವಾಗಿದ್ದು ಕರಾವಳಿ ಜಿಲ್ಲೆಯಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆಯೆಂದು ವಿಶ್ಲೇಷಿಸಲಾಗುತ್ತಿದೆ.
ಕ್ಯಾಂಪ್ಕೋ ಚುನಾವಣೆ:ಒಮ್ಮತ ಮೂಡಿಸುವಲ್ಲಿ ವಿಫಲರಾದ ಪ್ರಮುಖರು | ಕರ್ನಾಟಕ ವಲಯ ಸಿ ವರ್ಗ ಆರು ಸ್ಥಾನಕ್ಕೆ 8 ಅಭ್ಯರ್ಥಿಗಳು ಕಣದಲ್ಲಿ
Savistara
Bureau Report
[t4b-ticker]












































