ಕಾಮನ್‌ವೆಲ್ತ್ ಗೇಮ್ಸ್: ಪದಕ ಪಟ್ಟಿಯಲ್ಲಿ ಭಾರತೀಯ ಸೇನೆಯದ್ದೇ ದರ್ಬಾರ್: ಪದಕಗಳಲ್ಲಿ ಶೇ. 46 ಸೈನಿಕರ ಪಾಲು..!

Picture of Savistara

Savistara

Bureau Report

ಹೊಸದಿಲ್ಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (CWG)ಭಾರತದ ಪದಕಗಳ ಸಂಖ್ಯೆ ಹೆಚ್ಚಿಸುವಲ್ಲಿ ನಮ್ಮ ದೇಶದ ಹೆಮ್ಮೆಯ ಸೈನಿಕರು ಸಿಂಹಪಾಲು ಕೊಡುಗೆ ನೀಡಿದ್ದಾರೆ. ಭಾರತ ಗೆದ್ದಿರುವ ಒಟ್ಟು 39 ಪದಕಗಳ ಪೈಕಿ, ಶೇ. 46 ರಷ್ಟು ಪದಕಗಳನ್ನು ಭಾರತೀಯ ಸೇನೆ ಮತ್ತು ನೌಕಾಪಡೆಯ ಸಿಬ್ಬಂದಿಗಳೇ ಮುಡಿಗೇರಿಸಿಕೊಂಡಿರುವುದು ವಿಶೇಷ.

ಸೇನಾ ಕ್ರೀಡಾಪಟುಗಳ ಭರ್ಜರಿ ಸಾಧನೆ:ಭಾರತೀಯ ಸೇನೆಯಿಂದ ಕಣಕ್ಕಿಳಿದಿದ್ದ 20 ಕ್ರೀಡಾಪಟುಗಳ ತಂಡವು ಒಟ್ಟು 16 ಪದಕಗಳನ್ನು ಗೆದ್ದು ಬೀಗಿದೆ. ಇದರಲ್ಲಿ 8 ಚಿನ್ನ. 7 ಬೆಳ್ಳಿ ಹಾಗೂ 1 ಕಂಚಿನ ಪದಕಗಳು ಸೇರಿವೆ. ಇದರ ಜೊತೆಗೆ ಭಾರತೀಯ ನೌಕಾಪಡೆಯ ಇಬ್ಬರು ಸಿಬ್ಬಂದಿಗಳು ಸಹ ಪದಕಗಳನ್ನು ಗೆದ್ದಿದ್ದಾರೆ. ಒಟ್ಟಾರೆಯಾಗಿ ಸಶಸ್ತ್ರ ಪಡೆಗಳ ಕ್ರೀಡಾಪಟುಗಳು ಭಾರತದ 39 ಪದಕಗಳಲ್ಲಿ 18 ಪದಕಗಳನ್ನು ತಂದುಕೊಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಶುಭಕೋರಿದ ಸೇನಾ ಮುಖ್ಯಸ್ಥರು:ಸೈನಿಕರ ಈ ಅಪ್ರತಿಮ ಸಾಧನೆಯನ್ನು ಶ್ಲಾಘಿಸಿರುವ ಭಾರತೀಯ ಸೇನೆಯು ‘ಎಕ್ಸ್’ (ಟ್ವಿಟರ್) ಮೂಲಕ ಅಭಿನಂದನೆ ಸಲ್ಲಿಸಿದೆ. “ಹರ್ ಕಾಮ್ ದೇಶ್ ಕೆ ನಾಮ್” (ಪ್ರತಿ ಕೆಲಸವೂ ದೇಶಕ್ಕಾಗಿ) ಎಂಬ ಘೋಷವಾಕ್ಯದೊಂದಿಗೆ, ಸೇನಾ ಮುಖ್ಯಸ್ಥರು (COAS) ಮತ್ತು ಭಾರತೀಯ ಸೇನೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳು ಸೈನಿಕರ ಅತ್ಯುತ್ತಮ ಪ್ರದರ್ಶನಕ್ಕೆ ಹೃತೂರ್ವಕ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.

ಗಡಿ ಕಾಯುವ ಜೊತೆಗೆ ಕ್ರೀಡಾಂಗಣದಲ್ಲೂ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದ ಸೈನಿಕರ ಈ ಸಾಧನೆಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

[t4b-ticker]
error: Content is protected !!