ಕಟೀಲು ಮೇಳ ಜಾತಿ ಅಥವಾ ಕೋಮುವಾದದ ಆಧಾರದಲ್ಲಿ ನಡೆಯುವುದಿಲ್ಲ” – ಹರಿನಾರಾಯಣ ದಾಸ ಅಸ್ರಣ್ಣ

Picture of Savistara

Savistara

Bureau Report

ಕಟೀಲು ಮೇಳದ ದೇವರು ಬ್ರಾಹ್ಮಣರನ್ನು ಬಿಟ್ಟು ಉಳಿದವರ ಮನೆಗಳಿಗೆ ಹೋಗುವುದಿಲ್ಲ ಹಾಗೂ ಕಟೀಲು ಮೇಳ ಕೋಮುವಾದವನ್ನು ಹರಡಿಸುತ್ತದೆ ಎಂಬ ನವೀನ್ ಸೂರಿಂಜೆ ಆರೋಪಗಳಿಗೆ ಹರಿನಾರಾಯಣ ದಾಸ ಅಸ್ರಣ್ಣ ಪ್ರತಿಕ್ರಿಯೆ ನೀಡಿದ್ದಾರೆ.”ಕಟೀಲು ಮೇಳದ ದೇವರು ಬೇರೆ ಜಾತಿಯವರ ಮನೆಗೆ ಹೋಗುವುದಿಲ್ಲ ಎನ್ನುವ ಹೇಳಿಕೆಯೇ ತಪ್ಪು. ದೇವರನ್ನು ಯಾವ ಮನೆಗೆ ಕೊಂಡೊಯ್ಯಬೇಕು ಎಂಬುದು ಜಾತಿಯ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ. ಅದು ಸಸ್ಯಾಹಾರ, ಮಾಂಸಾಹಾರ, ಸಾತ್ವಿಕ ಆಚರಣೆ ಹಾಗೂ ಪೂಜೆಗೆ ಅಗತ್ಯವಾದ ಶುದ್ಧಾಚಾರದ ಆಧಾರದ ಮೇಲೆ ನಿರ್ಧಾರವಾಗುತ್ತದೆ” ಎಂದು ಅವರು ಹೇಳಿದ್ದಾರೆ.”ಸಸ್ಯಾಹಾರ ಪಾಲಿಸುವ ಬ್ರಾಹ್ಮಣೇತರರ ಮನೆಗಳಲ್ಲಿಯೂ ಕಟೀಲು ದೇವರನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ನಾರಾಯಣ ಗುರು ಮಂದಿರಗಳಲ್ಲಿಯೂ ಕಟೀಲು ದೇವರ ಪೆಟ್ಟಿಗೆಯನ್ನು ಇಟ್ಟು ಪೂಜೆ ನಡೆಯುತ್ತದೆ. ಮಾಂಸಾಹಾರ ಸೇವಿಸುವ ಮನೆಗಳಲ್ಲಿಯೂ ಪೂಜೆಯ ಸಂದರ್ಭದಲ್ಲಿ ಅಗತ್ಯವಾದ ಶುದ್ಧಾಚಾರ ಪಾಲಿಸಿ, ಪ್ರತ್ಯೇಕ ವ್ಯವಸ್ಥೆ ಮಾಡಿದ ಬಳಿಕ ದೇವರ ಪೂಜೆ ನಡೆಸುವ ಪದ್ಧತಿಯೂ ಇದೆ” ಎಂದು ಅವರು ವಿವರಿಸಿದರು.”ಬ್ರಾಹ್ಮಣರ ಮನೆಯಾದರೂ ಶುದ್ಧಾಚಾರ ಇಲ್ಲದಿದ್ದರೆ ಅಂತಹ ಮನೆಯಲ್ಲಿಯೂ ದೇವರನ್ನು ಇಟ್ಟು ಪೂಜೆ ಮಾಡುವುದಿಲ್ಲ. ಆದ್ದರಿಂದ ಇದು ಜಾತಿ ಆಧಾರಿತ ಪದ್ಧತಿ ಅಲ್ಲ” ಎಂದು ಸ್ಪಷ್ಟಪಡಿಸಿದರು.ಕಟೀಲು ಮೇಳದ ವಿರುದ್ಧ ಕೇಳಿಬಂದ ಕೋಮುವಾದದ ಆರೋಪವನ್ನೂ ತಳ್ಳಿಹಾಕಿದ ಅವರು, “ಕಟೀಲು ಮೇಳದಲ್ಲಿ ಪೌರಾಣಿಕ ಕಥೆಗಳನ್ನಷ್ಟೇ ಪ್ರದರ್ಶಿಸಲಾಗುತ್ತದೆ. ಪೌರಾಣಿಕ ಕಥೆಗಳ ಮೂಲಕ ಕೋಮುವಾದವನ್ನು ಹರಡುವ ಪ್ರಶ್ನೆಯೇ ಇಲ್ಲ. ಅಲ್ಲದೆ ಕಟೀಲು ಮೇಳದ ಸುಮಾರು 50 ಶೇಕಡಾ ಕಲಾವಿದರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ” ಎಂದು ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!