18ರಿಂದ 52 ವರ್ಷ ವಯೋಮಿತಿ ಒಳಗಿನ ನೌಕರರಿಗೆ ಮಾತ್ರ ಋತುಚಕ್ರ ರಜೆ

Picture of Savistara

Savistara

Bureau Report

ಬೆಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆವಾರ್ಷಿಕ 12 ವೇತನ ಸಹಿತ ಋತುಚಕ್ರ ರಜೆ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಈ ಸಂಬಂಧ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.ಸಂಪುಟ ಸಭೆ ಒಪ್ಪಿಗೆ ನೀಡಿದ್ದ ‘ಋತುಚಕ್ರ ರಜೆ ನೀತಿ-2025’ರ ಆಧಾರದ ಮೇಲೆ ಸರ್ಕಾರಿ ಆದೇಶ ಹೊರಬಿದ್ದಿದ್ದು ಕಾರ್ಖಾನೆಗಳ ಕಾಯ್ದೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗರ್ ಕಾರ್ಮಿಕರ (ಉದ್ಯೋಗಸ್ಥ ಮತ್ತು ಷರತ್ತುಗಳ) ಕಾಯ್ದೆ, ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆಗಳಡಿ ನೋಂದಣಿ ಆಗಿರುವ ಎಲ್ಲ ಕೈಗಾರಿಕೆ ಹಾಗೂ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೂ ಈ ರಜೆ ಅನ್ವಯ ಆಗಲಿದೆ.

ಋತುಚಕ್ರ ರಜೆಗೆ ಷರತ್ತುಗಳು ಅನ್ವಯ:

*18 ರಿಂದ 52 ವರ್ಷ ವಯೋಮಿತಿಯಲ್ಲಿನ ಮಹಿಳಾ ನೌಕರರು ಮಾತ್ರ ಈ ರಜೆ ಬಳಸಿಕೊಳ್ಳಲು ಅರ್ಹರು

* ಆರೋಗ್ಯ, ಕಾರ್ಯದಕ್ಷತೆ, ಕ್ಷಮತೆ ಹೆಚ್ಚಿಸಿ ಮನೋಸ್ಥೆರ್ಯ ವೃದ್ಧಿಸುವ ಉದ್ದೇಶ

*ಋತುಚಕ್ರದ ಸಂದರ್ಭದಲ್ಲಿ ಪ್ರತಿ ಮಾಸಿಕ 1 ದಿನದ ರಜೆ ಮಂಜೂರು ಮಾಡಬೇಕು

* ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಲ್ಲಿಯೇ ಬಳಸಿಕೊಳ್ಳಬೇಕು. ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶ ఇల్ల.

*ಋತುಚಕ್ರ ರಜೆಗೆ ಯಾವುದೇ ವೈದ್ಯಕೀಯ ಪ್ರಮಾಣಪತ್ರ ಒದಗಿಸುವ ಅವಶ್ಯಕತೆ ಇಲ್ಲ

[t4b-ticker]
error: Content is protected !!