ಮಿನಿ ಹರಾಜಿಗೆ ಮುನ್ನವೇ ಕೆಕೆಆರ್ ಸೇರಿಕೊಂಡ ಶೇನ್ ವಾಟ್ಸನ್

Picture of Savistara

Savistara

Bureau Report

ಕೋಲ್ಕತ್ತಾ: ಮಿನಿ ಹರಾಜಿಗೆ ಮೊದಲು ಕೋಲ್ಕತ್ತಾ ನೈಟ್ರೈಡರ್ಸ್ ಫ್ರಾಂಚೈಸಿಯು ತನ್ನ ಕೋಚಿಂಗ್ ಯುನಿಟ್ ಗಟ್ಟಿ ಮಾಡುತ್ತಿದೆ. ಇದೀಗ ತಂಡದ ಸಹಾಯಕ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾಟ್ಸನ್ ಅವರನ್ನು ನೇಮಕ ಮಾಡಿದೆ.ಈ ಹಿಂದೆ ರಿಕಿ ಪಾಂಟಿಂಗ್ ಅವರಡಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶೇನ್ ವಾಟ್ಸನ್ ಇದೇ ಹುದ್ದೆ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಮೂರು ವರ್ಷಗಳ ಬಳಿಕ ಮತ್ತೆ ಐಪಿಎಲ್ ಕೋಚಿಂಗ್ ಗೆ ಮರಳುತ್ತಿದ್ದಾರೆ.59 ಟೆಸ್ಟ್, 190 ಏಕದಿನ ಮತ್ತು 58 ಟಿ20ಐ ಪಂದ್ಯಗಳ ಅನುಭವಿ ಶೇನ್ ವಾಟ್ಸನ್ ಅವರು ಮುಖ್ಯ ಕೋಚ್ ಅಭಿಷೇಕ್ ನಾಯರ್ ಅವರಡಿಯಲ್ಲಿ ಕೆಕೆಆರ್ ಪರ ಕೆಲಸ ಮಾಡಲಿದ್ದಾರೆ.

ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಐಪಿಎಲ್ ನಲ್ಲೂ ಅದ್ಭುತ ಆಟವಾಡಿದ ಸಾಧಕ. 145 ಐಪಿಎಲ್ ಪಂದ್ಯಗಳಾಡಿರುವ ವಾಟ್ಸನ್ ನಾಲ್ಕು ಶತಕ ಗಳಿಸಿದ್ದಾರೆ.ವೆಸ್ಟ್ ಇಂಡೀಸ್ ಟಿ20 ದಿಗ್ಗಜ ಡೇನ್ ಬ್ರಾವೋ ಅವರು ಕೆಕೆಆರ್ ತಂಡದ ಮೆಂಟರ್ ಆಗಿ ಮುಂದುವರಿಯಲಿದ್ದಾರೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!