ಬೆಂಗಳೂರು (ನ.14): ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ಮಹಾಘಟಬಂಧನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬಿಹಾರದಲ್ಲಿ ಎನ್‌ಡಿಎ ಭಾರೀ ಮುನ್ನಡೆ ಸಾಧಿಸಿದ್ದು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಬಿಹಾರದ ಸಂಪೂರ್ಣ ಫಲಿತಾಂಶ ಹೊರ ಬೀಳುವ ಮುನ್ನವೇ ಕಾಂಗ್ರೆಸ್ ನಾಯಕರು ಬಿಹಾರದಲ್ಲೂ ಮತಗಳ್ಳತನವಾಗಿದೆ ಎನ್ನುವ ದಾಳ ಉರುಳಿಸಿದ್ದಾರೆ. ಇತ್ತ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವ್ರು ಕೂಡ ಬಿಹಾರದಲ್ಲಿ ವೋಟ್ ಚೋರಿಯಾಗಿದೆ ಎಂದು ಆರೋಪ ಮಾಡಿದ್ದಾರೆ.
‘ಬಿಹಾರದಲ್ಲೂ ವೋಟ್ ಚೋರಿ‘
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಸೋಲು ಖಚಿತವಾಗ್ತಿದ್ದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದತ್ತ ಬೊಟ್ಟು ಮಾಡ್ತಿದ್ದಾರೆ. ಬಿಹಾರದಲ್ಲಿ ಮತಗಳ್ಳತನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಜನರು ಕೊಟ್ಟ ತೀರ್ಪು -ಸಿಎಂ
ಜನರು ಕೊಟ್ಟ ಈ ತೀರ್ಪನ್ನು ಒಪ್ಪಬೇಕು ಎಂದ ಸಿಎಂ ಸಿದ್ದರಾಮಯ್ಯ, ನಾನು ಅಲ್ಲಿಗೆ ಹೋಗಿರಲಿಲ್ಲ. ಅಲ್ಲಿ ಕಾಂಗ್ರೆಸ್‌ಗೆ ಯಾಕೆ ಹಿನ್ನಡೆ ಆಗಿದೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೇ NDA ಯಾಕೆ ಇಷ್ಟು ದೊಡ್ಡ ಬಹುಮದಲ್ಲಿ ಗೆದ್ದಿದೆ ಅನ್ನೋದೆ ಗೊತ್ತಾಗ್ತಿಲ್ಲ ಎಂದು ಸಿಎಂ ಬೇಸರ ಹೊರಹಾಕಿದ್ದಾರೆ.
ಕಾಂಗ್ರೆಸ್ ಅಜೆಂಡಾ OBC ಅವರೇ ಬಿಹಾರದಲ್ಲಿ ಕೈ ಹಿಡಿದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಿತೀಶ್ ಕುಮಾರ್ ಕೂಡಾ ಯಾರು? ಅವರು ಓಬಿಸಿ ಅಲ್ಲವಾ? ಎಂದಿದ್ದಾರೆ. ಬಿಹಾರದಲ್ಲೂ ಕೂಡಾ ವೋಟ್ ಚೋರಿ ಆಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.ಸ್ಪರ್ಧಿಸಿದ 101 ಸ್ಥಾನಗಳಲ್ಲಿ ಬಿಜೆಪಿ ಬರೋಬ್ಬರಿ 78ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಭಾರೀ ಗೆಲುವಿನತ್ತ ಮುಖಮಾಡಿದೆ. ಇದೇ ಟ್ರೆಂಡ್ ಮುಂದುವರಿದಲ್ಲಿ, ಬಿಜೆಪಿ ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.
170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ
243 ಸ್ಥಾನಗಳಲ್ಲಿ ಎನ್‌ಡಿಎ (ಬಿಜೆಪಿ + ಜೆಡಿ(ಯು)) 170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಮಹಾಘಟಬಂಧನ್ (ಆರ್‌ಜೆಡಿ + ಕಾಂಗ್ರೆಸ್ + ಇತರರು) ಕೇವಲ 60ರ ಒಳಗೆ ಸೀಮಿತವಾಗಿದೆ. ಕಾಂಗ್ರೆಸ್‌ಗೆ ಇದು ದೊಡ್ಡ ಆಘಾತವಾಗಿದ್ದು, ಇದಾಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಮುಂದಾಗಿದ್ದಾರೆ.
ಸೋಲು ಒಪ್ಪಿಕೊಳ್ತಾ ಕಾಂಗ್ರೆಸ್?
ಆರಂಭಿಕ ಮತ ಎಣಿಕೆಯಲ್ಲಿಯೇ ಕಾಂಗ್ರೆಸ್ ತನ್ನ ಸೋಲವನ್ನು ಒಪ್ಪಿಕೊಂಡಿರುವ ರೀತಿ ಕಾಣುತ್ತಿದೆ. ಎನ್‌ಡಿಎ ಮ್ಯಾಜಿಕ್ ನಂಬರ್ ದಾಟಿ ತುಂಬಾ ಮುಂದೆ ಸಾಗಿದೆ. ಇದು ಮಹಾಘಟಬಂಧನ್ಗೆ ಮಹಾ ಆಘಾತ ನಡಿದೆ. ಈ ಬಗ್ಗೆ ಇದಾಗಲೇ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದು, ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಇನ್ನೇನು ಊಹಿಸಲು ಸಾಧ್ಯ ಎಂದು ವೋಟ್ ಚೋರಿ ಬಗ್ಗೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.











































