ಹೊಸದಿಲ್ಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಆರಂಭಿಕ ವರದಿಗಳ ಪ್ರಕಾರ ಜೆಡಿಯು-ಆರ್‌ಜೆಡಿ ಮೈತ್ರಿಯ ಎನ್‌ಡಿಎ ಮುನ್ನಡೆ ಸಾಧಿಸಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗೆಲುವು ಎನ್‌ಡಿಎಗೆ ನಿಶ್ಚಿತ ಎಂದು ಪ್ರತಿಪಾದಿಸಿದ್ದು, ಪಕ್ಷದ ಮುಂದಿನ ಗೆಲುವು ಪಶ್ಚಿಮ ಬಂಗಾಳದಲ್ಲಿ ಎಂದು ಭವಿಷ್ಯ ನುಡಿದರು.“ಇಲ್ಲಿಯ ಜನರಿಗೆ ಜಂಗಲ್ ರಾಜ್ ಮತ್ತೆ ಬೇಕಿಲ್ಲ ಎಂದು ಬಿಹಾರವನ್ನು ಅರ್ಥಮಾಡಿಕೊಂಡವರಿಗೆ ಗೊತ್ತಾಗುತ್ತದೆ. ಬಿಹಾರ ನಾಗರಿಕರು ಅರಾಜಕತೆ ಮತ್ತು ಕೆಟ್ಟ ನಾಯಕತ್ವವನ್ನು ತಿರಾಸ್ಕಾರ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿ ಮಾತನಾಡುವುದಾದರೆ, ಬಿಹಾರದ ಗೆಲುವು ನಮ್ಮದೆ. ಈಗ ಬಂಗಾಳದ ಸರದಿ” ಎಂದು ಗಿರಿರಾಜ್ ಸಿಂಗ್ ಹೇಳಿದರು.“ನಾವು ಬಂಗಾಳದಲ್ಲಿಯೂ ಗೆಲುವು ಸಾಧಿಸಲಿದ್ದೇವೆ. ಅಲ್ಲಿರುವ ಸದ್ಯದ ಸರ್ಕಾರವು ಅರಾಜಕತೆಯಿಂದ ಕೂಡಿದ್ದು, ಹೊರ ಅಂಶಗಳಿಂದ ಪ್ರಭಾವಿತವಾಗಿದೆ. ಬಂಗಾಳದ ಜನರು ಅಂತಿಮವಾಗಿ ಸತ್ಯವನ್ನು ಗುರುತಿಸುತ್ತಾರೆ” ಎಂದು ಬಿಹಾರ ಬೆಗುಸರಾಯ್ ಕ್ಷೇತ್ರದ ಸಂಸದ ಸಿಂಗ್ ಹೇಳಿದರು.
ಬಿಹಾರ ಗೆದ್ದಾಯ್ತು, ಮುಂದೆ ಬಂಗಾಳದ ಸರದಿ: ಕೇಂದ್ರ ಸಚಿವ ಗಿರಿರಾಜ್
Savistara
Bureau Report
[t4b-ticker]












































