ಗೆಲ್ಲುವವರೆಗೂ ಮಾಸ್ಕ್ ತೆಗೆಯುವುದಿಲ್ಲ; ಪ್ರತಿಜ್ಞೆಗೈದ ಪುಷ್ಪಂ ಪ್ರಿಯಾ ಚೌಧರಿ

Picture of Savistara

Savistara

Bureau Report

ಗೆಲ್ಲುವವರೆಗೂ ನಾನು ಮಾಸ್ಕ್ ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡ ಮಹಿಳೆಯೊಬ್ಬರು 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಹೊಸ ಆಕಾಂಕ್ಷೆಗಳನ್ನು ಹೊತ್ತು, ಅಭಿವೃದ್ಧಿಯ ಪಟ್ಟಿಯಲ್ಲಿ ತನ್ನ ಅಭಿಪ್ರಾಯವನ್ನೂ ಸೇರಿಸುವ ಹಂಬಲದಿಂದ ಮುನ್ನುಗ್ಗಿ ಬಂದ ಮಹಿಳೆಯೇ, ಫ್ಲೋರಲ್ಸ್ ಪಾರ್ಟಿ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ.ಜೂನ್ 13, 1987 ರಂದು ದರ್ಭಾಂಗ್ ನ ಮಾಜಿ ಜೆಡಿಯು ಶಾಸಕ ವಿನೋದ್ ಕುಮಾರ್ ಚೌಧರಿಯವರ ಪುತ್ರಿಯಾಗಿ ಜನಿಸಿದ ಪುಷ್ಪಂ ಪ್ರಿಯಾ ಚೌಧರಿ, ಪದವಿಗಾಗಿ ಪುಣೆಗೆ ತೆರಳುವ ಮೊದಲು ದರ್ಭಾಂಗ್ ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಬಳಿಕ ಅವರು ಉನ್ನತ ಶಿಕ್ಷಣಕ್ಕಾಗಿ ಯುಕೆ ಗೆ ತೆರಳಿದ ಅವರು, 2019 ರಲ್ಲಿ ಸಸೆಕ್ಸ್ ವಿಶ್ವವಿದ್ಯಾಲಯದಿಂದ ಡೆವಲಪ್ ಮೆಂಟ್ ಸ್ಟಡೀಸ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಬ್ಲಿಕ್ ಎಡ್ಮಿನಿಸ್ಟೇಷನ್‌ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆಯುತ್ತಾರೆ.

ಅವರ ಅಜ್ಜ ಪ್ರೊಫೆಸರ್ ಉಮಾಕಾಂತ್ ಚೌಧರಿ ಹಾಗು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಬಹಳ ಆಪ್ತರಾಗಿದ್ದರು. ಜೊತೆಗೆ ಉಮಾಕಾಂತ್ ಚೌಧರಿ ಸಮತಾ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರ ಚಿಕ್ಕಪ್ಪ ವಿನಯ್ ಕುಮಾ‌ರ್ ಚೌಧರಿ, 2020ರ ವಿಧಾನಸಭಾ ಚುನಾವಣೆಯಲ್ಲಿ ಬೇಣಿಪುರದಿಂದ ಗೆದ್ದ ಜೆಡಿಯು ನಾಯಕರಾಗಿದ್ದಾರೆ.ಬಾಲ್ಯದಿಂದಲೂ ರಾಜಕೀಯವನ್ನು ಹತ್ತಿರದಲ್ಲಿಯೇ ನೋಡಿದ್ದರಿಂದಲೋ ಏನೋ ಪ್ರಿಯಾ ಚೌಧರಿ ಅವರಿಗೆ ರಾಜಕೀಯದ ಮೇಲೆ ಒಲವು ಮೂಡಲು ಪ್ರಾರಂಭವಾಗಿತ್ತು. ಮೊದಲು ಬಿಹಾರ ಸರ್ಕಾರದ ಪ್ರವಾಸೋದ್ಯಮ ಮತ್ತು ಆರೋಗ್ಯ ಇಲಾಖೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ ಅವರು, ನಂತರದ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು.

ತನ್ನದೇ ಒಂದು ಪಕ್ಷವನ್ನು ಸ್ಥಾಪಿಸುವ ಹಂಬಲದಿಂದ ಪುಷ್ಪಂ ಪ್ರಿಯಾ ಚೌಧರಿ ಮಾರ್ಚ್ 8, 2020 ರಂದು ‘ದಿ ಪ್ಯೂರಲ್ಸ್ ಪಾರ್ಟಿ’ ಅನ್ನು ಸ್ಥಾಪಿಸುತ್ತಾರೆ. ಹಿಂದಿನಿಂದಲೂ ಜಾತಿ ಮತ್ತು ಕೋಮುವಾದಿ ಪ್ರಾಬಲ್ಯವಿರುವ ಬಿಹಾರದ ರಾಜಕೀಯದಲ್ಲಿ, ಜಾತಿ ಮತ್ತು ಧರ್ಮದ ಗೆರೆಗಳನ್ನು ಮೀರಿ ಅಭಿವೃದ್ಧಿಗಾಗಿ ಜನರನ್ನು ಒಂದಾಗಿಸಲು ದಿಟ್ಟ ಹೆಜ್ಜೆಯನ್ನು ಇಡುತ್ತಾರೆ ಪ್ರಿಯಾ ಚೌಧರಿ. ಜೊತೆಗೆ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂದು ಬೃಹತ್ ಘೋಷಣೆಯೊಂದಿಗೆ ರಾಜಕೀಯ ಪ್ರವೇಶವನ್ನೂ ಮಾಡುತ್ತಾರೆ. ಬಿಳಿಯುಡುಪು ಧರಿಸಿ ಓಡಾಡುವ ರಾಜಕಾರಣಿಗಳಂತಲ್ಲದೆ, ಕಪ್ಪು ಉಡುಪು ಮತ್ತು ಮಾಸ್ಕ್ ಧರಿಸಿ ಸಮಾಜದ ಎದುರು ಕಾಣಿಸಿಕೊಳ್ಳುತ್ತಾರೆ ಪ್ರಿಯಾ ಚೌಧರಿ. ಜೊತೆಗೆ ಚುನಾವಣೆಯಲ್ಲಿ ಗೆದ್ದ ಬಳಿಕವೇ ತಮ್ಮ ಮಾಸ್ಕ್ ತೆಗೆದುಹಾಕುವುದಾಗಿ ಪ್ರತಿಜ್ಞೆಯನ್ನೂ ಮಾಡುತ್ತಾರೆ.

ಮೂಲಗಳ ಪ್ರಕಾರ, ಅವರು ಮೊದಲಿಗೆ 2020 ರಲ್ಲಿ ಎಲ್ಲಾ 243 ಸ್ಥಾನಗಳಲ್ಲಿಯೂ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರ ಪಕ್ಷದ ನೋಂದಣಿಯಲ್ಲಿ ವಿಳಂಬವಾದುದರಿಂದ ಹಾಗು ಇತರ ಕಾರಣಗಳಿಂದಾಗಿ ಅವರ ಪಕ್ಷವು ಕೇವಲ 148 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲು ಸಾಧ್ಯವಾಯಿತು. ದುರದೃಷ್ಟವಶಾತ್ ಇವರ ಪಕ್ಷದ ಯಾವುದೇ ಅಭ್ಯರ್ಥಿಗಳು ಗೆಲುವನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಪುಷ್ಪಂ ಪ್ರಿಯಾ ಚೌಧರಿ ಅವರು, ಬಹಿರಂಗವಾಗಿಯೇ ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯವನ್ನು ವಿರೋಧಿಸಿದರು. ಜೊತೆಗೆ ಅವರ ಅಭ್ಯರ್ಥಿಗಳ ಜಾತಿಯ ಬದಲಿಗೆ ಅವರ ಜನಾಂಗವನ್ನು ಹೈಲೈಟ್ ಮಾಡಿದರು. ಅವರ ನಾಮಪತ್ರಗಳಲ್ಲಿ ಅವರ ಧರ್ಮದ ಬದಲಿಗೆ “ಬಿಹಾರ” ಎಂದು ಉಲ್ಲೇಖಿಸಿದರು.ಈ ಬಾರಿ ಫ್ಲೋರಲ್ಸ್ ಪಾರ್ಟಿಯು ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪಕ್ಷಕ್ಕೆ ವಿಸಿಲ್ ಚಿಹ್ನೆ ನೀಡಿದ್ದು, ಪುಷ್ಪಂ ಪ್ರಿಯಾ ಚೌಧರಿ ಅವರು ದರ್ಭಾಂಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.ಕಪ್ಪು ಬಣ್ಣದ ಬಟ್ಟೆಯನ್ನು ತೊಡುವ ಅವರ ಬಳಿ ಈ ಬಣ್ಣ ಯಾಕೆ ಎಂದು ಕೇಳಿದಾಗ ಆಕೆಯು, “ರಾಜಕಾರಣಿಗಳು ಬಿಳಿ ಬಣ್ಣವನ್ನು ಯಾಕೆ ತೊಡುತ್ತಾರೆ ಎಂದು ತಿಳಿದುಕೊಂಡಿಲ್ಲ ಹಾಗಾಗಿ ನಾನು ಕಪ್ಪು ಬಣ್ಣ ಯಾಕೆ ಹಾಕಬಾರದು ಎಂದು ತಾನು ಕಪ್ಪು ಬಣ್ಣದ ಬಟ್ಟೆಗಳನ್ನು ತೊಡುತ್ತೇನೆ” ಎಂದು ಪ್ರತಿಕ್ರಿಯಿಸಿದ್ದರು.ದುರಾದೃಷ್ಟವಶಾತ್ ಈ ಬಾರಿಯ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಪುಷ್ಪಂ ಪ್ರಿಯಾ ಚೌಧರಿಯು ಸೋಲನ್ನು ಅನುಭವಿಸಿದ್ದಾರೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!