ಬಿಹಾರ ಆಯಿತು, ಪಶ್ಚಿಮ ಬಂಗಾಳ, ಅಸ್ಸಾಂನತ್ತ ಇನ್ನು ಬಿಜೆಪಿ ರಣತಂತ್ರ!

Picture of Savistara

Savistara

Bureau Report

ಬಿಹಾರದಲ್ಲಿ ಭರ್ಜರಿ ಜಯ ಕಂಡಿರುವ ಬಿಜೆಪಿ ಇದೀಗ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್‌ನತ್ತ ದೃಷ್ಟಿ ಹರಿಸಿದೆ. ಪ್ರಧಾನಿ ಮೋದಿ ತಮ್ಮ ಜಯದ ಭಾಷಣದಲ್ಲೂ ಈ ಬಗ್ಗೆ ಸೂಚನೆ ನೀಡಿದ್ದಾರೆ. ಅಸ್ಸಾಂನಲ್ಲಿ ಈಗಾಗಲೇ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದೆಯಾದರೂ ಮುಂದಿನ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭದ್ರಕೋಟೆಯನ್ನು ಕೆಡವಲು ಬಿಜೆಪಿ ಕಳೆದೊಂದು ದಶಕದಿಂದ ಪ್ರಯತ್ನಿಸುತ್ತಲೇ ಬಂದಿದ್ದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ.

ಹಲವು ಹಿಂಸಾಚಾರ, ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳು ಟಿಎಂಸಿ ಸರ್ಕಾರಕ್ಕೆ ಕಳಂಕ ತಂದಿವೆ. ಹಾಗಿದ್ದೂ, ಮಮತಾ ಸರ್ಕಾರವು ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಗ್ರಾಮೀಣ ಮತದಾರರನ್ನು ಸೆಳೆಯಲು ಹಲವು ಪ್ರಯತ್ನಗಳನ್ನು ಮಾಡಿದೆ. ಇನ್ನು ಬಿಜೆಪಿ ತಳ ಮಟ್ಟದಿಂದ ಅಂದರೆ ಪಂಚಾಯತ್ ಆಡಳಿತದಿಂದಲೇ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಿರತವಾಗಿದೆ. ಬಂಗಾಳದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದ್ದು ಎರಡೂ ಪಕ್ಷಗಳಿಗೆ ಇದು ಬಹಳ ಪ್ರಮುಖವಾಗಿದೆ.

ಬಿಜೆಪಿಯು 2026ರ ಚುನಾವಣೆಯಲ್ಲಿ ಟಿಎಂಸಿಗೆ ಪ್ರಬಲ ಸ್ಪರ್ಧೆ ನೀಡಲಿದೆ ಹಾಗೂ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆಯಬಹುದಾದರೂ ಗೆಲುವು ಕಷ್ಟ ಎಂದು ಚುನಾವಣಪೂರ್ವ ಸಮೀಕ್ಷೆಗಳು ಹೇಳುತ್ತವೆ. ಒಂದು ವೇಳೆ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ, ಭಾರತದ ಹಿಂದಿ ಭಾಷಿಕರ ಹೃದಯ ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲಿದೆ.

ಅಸ್ಸಾಮ್‌ನಲ್ಲಿ ಅಧಿಕಾರ ಉಳಿಯುತ್ತಾ?:

ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕೈಜೋಡಿಸಲು 7 ವಿಪಕ್ಷಗಳು ತೀರ್ಮಾನಿಸಿವೆ. ಇಲ್ಲಿ ಸಿಎಂ ಹಿಮಂತ್ ಬಿಸ್ವಾ ಅವರು ಜನಪ್ರಿಯರಾಗಿರುವರಾದರೂ ಬಿಜೆಪಿ ಪಾಲಿಗೆ ಈ ಚುನಾವಣೆ ಅಷ್ಟೇನೂ ಸುಲಭದ ತುತ್ತೇನಲ್ಲ. ಕಾಂಗ್ರೆಸ್‌ನ ಗೌರವ್ ಗೊಗೋಯ್ ಅವರ ಬಗ್ಗೆ ಜನರ ಒಲವು ಇರುವುದು ಹಲವಾರು ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಇವೆಲ್ಲದರ ಹೊರತಾಗಿಯೂ ರಾಜ್ಯದಲ್ಲಿನ ಹಾಲಿ ಬಿಜೆಪಿ ನೇತೃತ್ವದ ಸರಕಾರ ಮತ್ತು ಕೇಂದ್ರದಲ್ಲಿನ ಎನ್‌ಡಿಎ ಸರಕಾರದ ಸಾಧನೆಗಳು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೇರಿಸಲಿದೆ ಎಂಬ ವಿಶ್ವಾಸ ಬಿಜೆಪಿ ನಾಯಕರದ್ದಾಗಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!