ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಲಾಠಿ ಬೇಡ: ಭೀಮ್ ಆರ್ಮಿ ಆಗ್ರಹ

Picture of Savistara

Savistara

Bureau Report

ಬೆಂಗಳೂರು: ‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಪಥಸಂಚಲನದಲ್ಲಿ ಲಾಠಿ, ದೊಣ್ಣೆ ಬಳಸಲು ಸರ್ಕಾರ ಅನುಮತಿ ನೀಡಬಾರದು’ ಎಂದು ಭೀಮ್ ಆರ್ಮಿ ಆಗ್ರಹಿಸಿದೆ.

ಭೀಮ್ ಆರ್ಮಿ ಅಧ್ಯಕ್ಷ ರಾಜ್ ಗೋಪಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಪಥ ಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಗೊತ್ತಾಗಿದೆ. ಪ್ರಜಾಪ್ರಭುತ್ವದ ಹಕ್ಕಿನಡಿ ಪಥಸಂಚಲನ ಮಾಡಬಹುದು. ಬಿಎನ್‌ಎಸ್‌ಎಸ್-2023 ಸೆಕ್ಷನ್ 163ರಡಿ ಶಸ್ತ್ರ ವ್ಯತಿರಿಕ್ತ ಆಯುಧಗಳನ್ನು ಹಿಡಿದು ಮೆರವಣಿಗೆ ಮಾಡುವುದು ಕಾನೂನು ಬಾಹಿರ. ಆಯುಧಗಳು ಜನರಲ್ಲಿ ಭಯ ಹುಟ್ಟಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ’ ಎಂದು ತಿಳಿಸಿದರು.’ಒಂದು ವೇಳೆ ಲಾಠಿ ಹಿಡಿದು ಪಥ ಸಂಚಲನ ನಡೆಸಿದರೆ ಭೀಮ್ ಆರ್ಮಿ ಕಾನೂನು ಹೋರಾಟ ಮಾಡಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!