ಸುಬ್ರಹ್ಮಣ್ಯ ದೇವರಿಗೆ ಕೊಪ್ಪರಿಗೆ ಏರುವ ದಿನವೂ ರಥ ಬೀದಿಯಲ್ಲಿ ಜೆಸಿಬಿ ಮೂಲಕ ಕಾಮಗಾರಿ |ಲಕ್ಷಾಂತರ ಭಕ್ತರ ಶ್ರದ್ದೆ,ನಂಬಿಕೆ ಪಾವಿತ್ರ್ಯತೆಗೆ ಧಕ್ಕೆ ತರುವ ಕಾರ್ಯವಾಗುತ್ತಿದೆ ಭಕ್ತರಿಂದ ಪ್ರತಿಭಟನೆ,ಕಾಮಗಾರಿ ಸ್ಥಗಿತ

Picture of Savistara

Savistara

Bureau Report

ಸುಬ್ರಮಣ್ಯ:ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಠಿ ವಾರ್ಷಿಕ ಜಾತ್ರೋತ್ಸವ ನಿನ್ನೆಯ ದಿನ ಮೂಲ ಮೃತ್ತಿಕೆ ನಡೆದಿದ್ದು ಇಂದು ರಾಮ ಲಕ್ಷ್ಮಣ ಕೊಪ್ಪರಿಗೆ ಏರುವ ಮೂಲಕ ಚಾಲನೆ ದೊರೆತಿದೆ ಲಕ್ಷಾಂತರ ಭಕ್ತರು ಜಾತ್ರೆ ಪ್ರಾರಂಭ ಕೊಪ್ಪರಿಗೆ ಏರಿದ ನಂತರ ಷಷ್ಠಿ ಮುಗಿಯುವ ತನಕ ದೇವಸ್ಥಾನ ಸುತ್ತಮುತ್ತ ವ್ಯಾಪ್ತಿಯಲ್ಲಿ ಮಣ್ಣು ಅಗೆಯುವುದು, ಬೇರೆ ಇನ್ನಿತರ ಕೆಲಸ ಕಾರ್ಯ ಮಾಡುವುದಿಲ್ಲ ಅದೊಂದು ನಂಬಿಕೆಯ ವಿಚಾರ ಆದರೆ ಇಂತಹ ಪವಿತ್ರವಾದ ದಿನ ಲಕ್ಷಾಂತರ ಜನರ ನಾಗರಾಧನೆ ಯ ಪವಿತ್ರ ಮಣ್ಣಿನ ಕ್ಷೇತ್ರವಾಗಿರುವ ಕುಕ್ಕೆಯ ರಥ ಬೀದಿಯಲ್ಲಿ ಜೆಸಿಬಿ ಮೂಲಕ ನಿರಂತರವಾಗಿ ಮಣ್ಣು ಅಗೆಯುವ ಮೂಲಕ ಭಕ್ತರ ನಂಬಿಕೆಗೆ ಘಾಸಿಗೊಳಿಸುವ ಕಾರ್ಯ ದೇವಸ್ಥಾನ ಆಡಳಿತ ಮಂಡಳಿ ಮಾಡುತ್ತಿದೆಯೆಂದು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಭಕ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದು ಈ ವಿಚಾರವಾಗಿ ಭಕ್ತರ ಆಕ್ರೋಶಕ್ಕೆ ಮಣಿದು ಕೆಲಸ ಸ್ಥಗಿತಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಕಿಶೋರ್ ಶಿರಾಡಿ,ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಸನ್ನ ದರ್ಬೆ,ವನಜ ಭಟ್, ಮಲೆ ಕುಡಿಯ ಸಮುದಾಯದ ಪ್ರಮುಖರು ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಮೋನಪ್ಪ ಮಾನಾಡು, ದಿನೇಶ್ ಸಂಪ್ಯಾಡಿ, ಚಿದಾನಂದ, ರಾಜೇಶ್ ಯನ್. ಎಸ್ಅಚ್ಯುತ ಗೌಡ, ಚಿದಾನಂದ ಕಂದಡ್ಕ, ಶ್ರೀ ಕುಮಾರ್, ಪ್ರಕಾಶ್ ಬಿಳಿನೆಲೆ, ಕಾರ್ತಿಕ್, ಹೆಚ್ ಎಲ್ ವೆಂಕಟೇಶ್, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!