ಸುಳ್ಯದಲ್ಲಿ ಯುವ ಸಂಕಲ್ಪ ಸಮಾವೇಶ | ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹು ಮುಖ್ಯವಾದದ್ದು ಅಖಿಲ ಭಾರತ ಗ್ರಾಮ ವಿಕಾಸ್ ಸಂಯೋಜಕ ಗುರುರಾಜ್

Picture of Savistara

Savistara

Bureau Report

ಸುಳ್ಯ:ಅರೆಸೆಸ್ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಸುಳ್ಯ ಕೇಂದ್ರದ ಯುವ ಸಂಕಲ್ಪ ಸಮಾವೇಶ ದುರ್ಗಾ ಪರಮೇಶ್ವರಿ ಕಲಾಮಂದಿರ ಕೇರ್ಪಳ ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಭಾರತ ಗ್ರಾಮ ವಿಕಾಸ ಸಂಯೋಜಕ ಗುರುರಾಜ್ ಭಾರತ ಬಹುಪಾಲು ಯುವಕರನ್ನು ಒಳಗೊಂಡಿರುವ ದೇಶವಾಗಿದೆ ನಮ್ಮಲ್ಲಿನ ಸಾಮರ್ಥ್ಯ ಶಕ್ತಿಯಿದ್ದು ಆದನ್ನು ಬಳಸಿಕೊಂಡು ಪ್ರಬುದ್ಧ ಸಂಘಟಿತ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ಯುವಕರ ಮೇಲಿದೆಯೆಂದು ತಿಳಿಸಿದರು. ಈ ವೇಳೆ ಸುಳ್ಯ ತಾಲೂಕು ಸಂಘಚಾಲಕ್ ಚಂದ್ರಶೇಖರ ತಳೂರು,ಸಹ ಸಂಘಚಾಲಕ್ ಪ್ರದ್ಯುಮ್ನ ಉಬರಡ್ಕ,ಸಂಘಟನೆ ಪ್ರಮುಖರು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.ಸಮಾವೇಶದಲ್ಲಿ ಆಟಗಳು, ಗುಂಪು ಚರ್ಚೆ, ಸಂಘದ ವಿಡಿಯೋ ಪ್ರದರ್ಶನ , ರಸಪ್ರಶ್ನೆ, ಸಂಕಲ್ಪ ಮಂದಿರ ಮುಂತಾದ ಚಟುವಟಿಕೆ ಏರ್ಪಡಿಸಲಾಗಿತ್ತು. ನೂರಾರು ಯುವ ಕಾರ್ಯಕರ್ತರು ಭಾಗವಹಿಸಿದ್ದರು

[t4b-ticker]
error: Content is protected !!