ಮೂಗಿಗೆ ನೀರು ತಾಕಿಸದಿರಿ: ಶಬರಿಮಲೆ ಭಕ್ತರಿಗೆ ಎಚ್ಚರಿಕೆ

Picture of Savistara

Savistara

Bureau Report

ಪಟ್ಟಣಂತಿಟ್ಟ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ, ನ.17ರಿಂದ ಆರಂಭವಾಗಲಿರುವ ಶಬರಿಮಲೆಯಾತ್ರೆ ಯಾತ್ರಿಕರಿಗೆ ಕೇರಳ ಸರ್ಕಾರವು ಆರೋಗ್ಯ ಮಾರ್ಗದರ್ಶಿ ಬಿಡುಗಡೆ ಮಾಡಿದೆ.ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ ವಹಿಸಬೇಕು, ಯಾತ್ರೆಗೆ ಬರುವಾಗ ಅಗತ್ಯ ಔಷಧ ತರಬೇಕು, ಯಾತ್ರೆ ಆರಂಭಕ್ಕೂ ಕೆಲ ದಿನಗಳ ಮೊದಲೇ ವಾಕಿಂಗ್ ಅಭ್ಯಾಸ ಮಾಡಿಕೊಳ್ಳಿ. ಬೆಟ್ಟ ಹತ್ತುವಾಗ ಧಾವಂತ ಮಾಡದೆ ನಿಧಾನವಾಗಿ ಹತ್ತಿ. ಆರೋಗ್ಯ ಸಹಾಯ ಬೇಕಿದ್ದಲ್ಲಿ ಸಿಬ್ಬಂದಿಯನ್ನು ಕೂಡಲೇ ಸಂಪರ್ಕಿಸಿ, ಹಾವು ಕಡಿದಲ್ಲಿ ತಕ್ಷಣವೇ ನಮ್ಮ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸೂಚಿಸಿದೆ. ಜೊತೆಗೆ ಯಾತ್ರಿಕರಿಗೆ ಬಯಲು ಬಹಿರ್ದೆಸೆ ನಿಷೇಧಿಸಲಾಗಿದೆ. ನಿಗದಿತ ಸ್ಥಳಗಳಲ್ಲಿಯೇ ಶೌಚಕರ್ಮ ಮುಗಿಸಿ, ಸಾಬೂನಿನಿಂದ ಕೈತೊಳೆದುಕೊಳ್ಳಬೇಕು, ಕೇವಲ ಬಿಸಿ ನೀರನ್ನು ಕುಡಿಯಬೇಕು ಎಂದು ಸೂಚನೆ ನೀಡಿದೆ. ತುರ್ತು ಪರಿಸ್ಥಿತಿಗೆ 04735 203232 ಸಂಖ್ಯೆಗೆ ಕರೆ ಮಾಡಬಹುದೆಂದು ತಿಳಿಸಿದೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!