ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೋ ಪಾಲಿಗೆ ಬಿಡುವಿರದ ಕಾರ್ಯಭಾರ

Picture of Savistara

Savistara

Bureau Report

ಕೋಲ್ಕತ್ತ: ತಂತ್ರಜ್ಞಾನ ಅಭಿವೃದ್ದಿ, ವಿವಿಧ ಉಪಗ್ರಹಗಳಉಡ್ಡಯನ ಜೊತೆಗೆ ಮಹತ್ವಾಕಾಂಕ್ಷೆಯ ಚಂದ್ರಯಾನ-4 ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದ್ದು, ಸಂಸ್ಥೆಯ ಕಾರ್ಯದ ಒತ್ತಡ ಮತ್ತಷ್ಟೂ ಹೆಚ್ಚಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಏಳು ಉಪಗ್ರಹಗಳ ಉಡ್ಡಯನಕ್ಕೆ ಸಿದ್ಧತೆ ನಡೆಯುತ್ತಿದೆ. 2027ಕ್ಕೆ ಮಾನವ ಸಹಿತ ಗಗನಯಾನವನ್ನು ಕಾರ್ಯಗತಗೊಳಿಸಬೇಕಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.ಪಿಟಿಐಗೆ ಸಂದರ್ಶನ ನೀಡಿರುವ ಅವರು, ಸಂಸ್ಥೆಯ ಪ್ರಸಕ್ತ ಹಾಗೂ ಉದ್ದೇಶಿತ ಯೋಜನೆಗಳ ಕುರಿತು ವಿವರಿಸಿದ್ದಾರೆ.’ಪ್ರಸಕ್ತ ಹಣಕಾಸು ವರ್ಷದೊಳಗಾಗಿ ಇನ್ನೂ 7 ಉಪಗ್ರಹಗಳನ್ನು ಉಡ್ಡಯನ ಮಾಡಲಾಗುವುದು. ವಾಣಿಜ್ಯ ಸಂವಹನ ಉಪಗ್ರಹವೂ ಸೇರಿದಂತೆ ಇತರ ವೈಮಸಾಧನಗಳ ಉಡ್ಡಯನಕ್ಕೆ ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ರಾಕೆಟ್‌ಗಳನ್ನು ಅಣಿಗೊಳಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಮೊದಲ ಬಾರಿಗೆ ಪಿಎಸ್‌ಎಲ್‌ವಿಯನ್ನು ದೇಶದ ಉದ್ದಿಮೆಗಳೇ ಸಂಪೂರ್ಣವಾಗಿ ನಿರ್ಮಿಸಿದ್ದು, ಇದರ ಉಡ್ಡಯನವು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲಾಗಲಿದೆ’ ಎಂದು ನಾರಾಯಣನ್ ಹೇಳಿದ್ದಾರೆ.’ಚಂದ್ರಯಾನ-4 ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು ಭಾರತ ಕೈಗೊಳ್ಳಲಿರುವ ಅತ್ಯಂತ ಸಂಕೀರ್ಣ ಚಂದ್ರನ ಅನ್ವೇಷಣೆಯಾಗಿದೆ. ಸಂಶೋಧನೆಗಾಗಿ ಚಂದ್ರನ ಮೇಲ್ಮಯಿಂದ ಮಾದರಿಗಳನ್ನು ಭೂಮಿಗೆ ತರುವುದಕ್ಕೆ ಅನುವಾಗುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ’ ಎಂದಿದ್ದಾರೆ.

ನಾರಾಯಣನ್ ಹೇಳಿದ್ದು..

* ತನ್ನ ಬೇಡಿಕೆಗೆ ಅನುಗುಣವಾಗಿ ಮುಂದಿನ ಮೂರು ವರ್ಷಗಳಲ್ಲಿ ಉಪಗ್ರಹಗಳ ತಯಾರಿಕೆಯನ್ನು ಮೂರುಪಟ್ಟು ಹೆಚ್ಚಿಸಲು ಇಸ್ರೋದಿಂದ ಕ್ರಮ50

* ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ ಸಹಯೋಗದಲ್ಲಿ ‘ಲುಪೆಕ್ಸ್’ (ಚಂದ್ರನ ಧ್ರುವಗಳ ಅನ್ವೇಷಣೆ ಕಾರ್ಯಕ್ರಮ) ಅನುಷ್ಠಾನ. ಚಂದಿರನ ದಕ್ಷಿಣ ಧ್ರುವ ಕುರಿತು ಅಧ್ಯಯನ ಗುರಿ

* 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದಕ್ಕೆ ಸಂಬಂಧಿಸಿ ಕೆಲಸ ಆರಂಭ

* ಪ್ರಸ್ತುತ ಭಾರತದ ಬಾಹ್ಯಾಕಾಶ ಆರ್ಥಿಕತೆ ಗಾತ್ರ 8.2 ಶತಕೋಟಿ ಡಾಲರ್ (ಅಂದಾಜು ₹72 ಸಾವಿರ ಕೋಟಿ) ಇದೆ. 2033ರ ಹೊತ್ತಿಗೆ ಇದು 44 ಶತಕೋಟಿ (ಅಂದಾಜು ₹3 ಲಕ್ಷ ಕೋಟಿ) ತಲುಪಲಿದೆ ಎಂದು ಅಂದಾಜಿಸಲಾಗಿದೆ

* ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ 450 ಉದ್ದಿಮೆಗಳು ಹಾಗೂ 330 ಸಾರ್ಟ್‌ಅಪ್‌ಗಳು ಸಕ್ರಿಯವಾಗಿವೆ

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!