ಮತಪಟ್ಟಿ ಪರಿಷ್ಕರಣೆಗೆ ಬೆದರಿ | ಅಕ್ರಮ ವಲಸಿಗರು ಬಾಂಗ್ಲಾಗೆ! | ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಮೊದಲೇ ಪಲಾಯನ

Picture of Savistara

Savistara

Bureau Report

ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿರುವ ಮತದಾ ರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರಾಜ್ಯದಲ್ಲಿ ಅಕ್ರಮವಾಗಿ ಬೀ ಡುಬಿಟ್ಟಿದ್ದ ಅಕ್ರಮ ಬಾಂಗ್ಲಾ ದೇಶಿ ವಲಸಿಗರನ್ನು ತಲ್ಲಣಗೊ ಳಿಸಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿ ಗರು ತಮ್ಮ ತವರಿನತ್ತ ದೌಡಾ ಯಿಸತೊಡಗಿದ್ದಾರೆ. ಕಳೆದ 6 ದಿನಗಳಲ್ಲಿ 1,200 ವಲಸಿಗರು ಬಾಂಗ್ಲಾಕ್ಕೆ ಮರಳಿ ದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಗಾಳದ ಉತ್ತರ 24 ಪರಗಣ ಜಿಲ್ಲೆ ಗಡಿಯಲ್ಲಿ ರಾತ್ರಿ ವೇಳೆ ಸಾವಿರಾರು ಅಕ್ರಮ ವಲಸಿಗರು ಬಾಂಗ್ಲಾಕ್ಕೆ ಹಿಂದಿ ರುಗುತ್ತಿರುವ ದೃಶ್ಯಗಳು ಕಂಡುಬಂದಿವೆ. ‎‫

ಬಾಂಗ್ಲಾಗೆ ಪರಾರಿ ಏಕೆ?

  • ಪ.ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ ದಿಂದ ಇತ್ತೀಚೆಗೆ ಮತದಾರ ಪಟ್ಟಿ ಪರಿಷ್ಕರಣೆ ಶುರು
  • ಮತದಾರರು ಸ್ಥಳೀಯರೇ ಹೌದೆ ಅಥವಾ ಅಕ್ರಮ ವಲಸಿಗರೇ ಎಂದು ಪರಿಷ್ಕರಣೆ ವೇಳೆ ಪರಿಶೀಲನೆ
  • ಆದರೆ ಬಂಗಾಳದಲ್ಲಿ ವಾಸವಾಗಲು ಹಣ ಕೊಟ್ಟು ಅಕ್ರಮವಾಗಿ ದಾಖಲೆ ಪಡೆದಿದ್ದ ಬಾಂಗ್ಲಾ ವಂಚಕರು
  • ಈಗ ಇಂಥ ನಕಲಿ ದಾಖಲೆಗಳನ್ನು ಪತ್ತೆ ಮಾಡುತ್ತಿ ರುವ ಚುನಾವಣಾ ಸಿಬ್ಬಂದಿ. ಪತ್ತೆಯಾದರೆ ಸೆರೆ
  • ಹೀಗಾಗಿ ಬಂಧನದ ಭೀತಿಯಿಂದ ಸ್ವದೇಶಕ್ಕೆ ಮರ ಳಲು ಆರಂಭಿಸಿರುವ ಅಕ್ರಮ ಬಾಂಗ್ಲಾ ವಲಸಿಗರು
[t4b-ticker]
error: Content is protected !!