ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ವಿರೋಧ ಪಕ್ಷಗಳು 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ದೆಹಲಿಯ ಕೆಂಪು ಕೋಟೆ ಬಳಿಯ ಅತ್ಮಾಹುತಿ ಸ್ಪೋಟ, ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ, ದೆಹಲಿ ವಾಯು ಮಾಲಿನ್ಯ ಸೇರಿದಂತೆ ಹಲವು ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ.ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಎಸ್‌ಐಆರ್ ಪ್ರಕ್ರಿಯೆ ಕುರಿತು ಕಲಾಪದಲ್ಲಿ ಚರ್ಚಿಸಲು, ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ, ಅಕ್ರಮಗಳನ್ನು ಎತ್ತಿತೋರಿಸಲು ಸಿದ್ಧತೆ ನಡೆಸಿವೆ. ಆದರೆ’ ಎಸ್‌ಐಆರ್ ಚುನಾವಣಾ ಆಯೋಗದ ಕಾರ್ಯವಿಧಾನವಾಗಿದ್ದು ಈ ಕುರಿತು
ಕಾರ್ಯವಿಧಾನವಾಗಿದ್ದು ಈ ಕುರಿತು ಸಂಸತ್ತಿನಲ್ಲಿ ಚರ್ಚಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಎಸ್. ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದ ತೃಣಮೂಲ ಕಾಂಗ್ರೆಸ್ ಈಗಾಗಲೇ ಪಶ್ಚಿಮ ಬಂಗಾಳದಾದ್ಯಂತ ಹೋರಾಟ ನಡೆಸುತ್ತಿದ್ದು ಸಂಸತ್ತಿನಲ್ಲೂ ಹೋರಾಟ ಮುಂದುವರಿಸುವ ನಿರೀಕ್ಷೆ ಇದ್ದು, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಸಾಥ್ ನೀಡಲು ಸಜ್ಜಾಗಿವೆ.
ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಂದು ಮುಕ್ತಾಯವಾಗಲಿದೆ. ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಚಿಂತಿಸುತ್ತಿದೆ. ಎಸ್‌ಐಆರ್ ಹೊರತುಪಡಿಸಿ ಪರಮಾಣು ಶಕ್ತಿ ಸುಧಾರಣೆಗಳು, ಪ್ರಸ್ತಾವಿತ ಭಾರತೀಯ ಉನ್ನತ ಶಿಕ್ಷಣ ಆಯೋಗ ಮತ್ತು ಚಂಡೀಗಢಕ್ಕೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.ಸರ್ವಪಕ್ಷ ಸಭೆ: ಭಾನುವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ 36 ರಾಜಕೀಯಪಕ್ಷಗಳ 50 ನಾಯಕರು ಭಾಗವಹಿಸಿದ್ದರು. ಈ ಸಭೆಯಲ್ಲಿ ವಿರೋಧ ಪಕ್ಷಗಳು ಎಸ್‌ಐಆರ್ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ’ ನೀಡಬೇಕು ಎಂದು ಒತ್ತಾಯಿಸಿದವು. ಆದರೆ ಎಸ್‌ಐಆರ್ ಕುರಿತು ಚರ್ಚೆ ಸಾಧ್ಯವಿಲ್ಲ, ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡುವಂತೆ ಆಡಳಿತಾರೂಢ ಪಕ್ಷದ ನಾಯಕರು ಮನವಿ ಮಾಡಿದ್ದಾರೆ. ಚಳಿಗಾಲದ ಅಧಿವೇಶನ ಕೇವಲ 15 ದಿನ ನಡೆಯುತ್ತಿದ್ದು, ಇದು ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯ ಅಧಿವೇಶನವಾಗಿದೆ.
ನಿರೀಕ್ಷಿತ ಪ್ರಮುಖ ಮಸೂದೆಗಳು
•ಜನ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ •ದಿವಾಳಿತನಮತ್ತು ದಿವಾಳಿ ಸಂಹಿತೆ (ತಿದ್ದುಪಡಿ) ಮಸೂದೆ •ಮಣಿಪುರ ಸರಕು ಮತ್ತುಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ• ರಾಷ್ಟ್ರೀಯ ಹೆದ್ದಾರಿಗಳು(ತಿದ್ದುಪಡಿ) ಮಸೂದೆ •ಪರಮಾಣು ಶಕ್ತಿ ಮಸೂದೆ ಆ ಕಾರ್ಪೊರೇಟ್ಕಾನೂನುಗಳು (ತಿದ್ದುಪಡಿ) ಮಸೂದೆ •ಸೆಕ್ಯೂರಿಟೀಸ್ ಮಾರುಕಟ್ಟೆಸಂಹಿತೆ ಮಸೂದೆ • ವಿಮಾ ಕಾನೂನುಗಳು (ತಿದ್ದುಪಡಿ) ಮಸೂದೆ •ಭಾರತದ ಉನ್ನತ ಮಧ್ಯಸ್ಥಿಕೆ ಮತ್ತು ಸೌಹಾರ್ದ (ತಿದ್ದುಪಡಿ)ಮಸೂದೆ •ಶಿಕ್ಷಣ ಆಯೋಗ ಮಸೂದೆಆ ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ













































