77 ಸ್ಥಾನಕ್ಕೆ 1355 ಕ್ರಿಕೆಟಿಗರ ರೇಸ್

Picture of Savistara

Savistara

Bureau Report

ಹೊಸದಿಲ್ಲಿ: ಅಬುಧಾಬಿಯಲ್ಲಿ ಡಿ. 16ರಂದು ನಡೆಯಲಿರುವ 2026ರ ಐಪಿಎಲ್‌ ಹರಾಜಿಗೆ 1,355 ಆಟಗಾರರ ಹೆಸರು ನೋಂದಾಯಿಸಲ್ಪಟ್ಟಿದೆ. ಇದರಲ್ಲಿ ವೆಂಕಟೇಶ್‌ ಅಯ್ಯರ್‌, ಮಾಯಾಂಕ್‌ ಅಗರ್ವಾಲ್‌, ರವಿ ಬಿಷ್ಣೋಯಿ, ಪೃಥ್ವಿ ಶಾ ಸೇರಿ ಒಟ್ಟು 1,062 ಮಂದಿ ಭಾರತೀಯರಿದ್ದಾರೆ.

ಅಯ್ಯರ್ ಮತ್ತು ಬಿಷ್ಣೋಯಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿದೆ. ವಿದೇಶಿಯರಲ್ಲಿ ಒಟ್ಟು 293 ಮಂದಿಯಿದ್ದು ಆಸ್ಟ್ರೇಲಿಯದ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ದುಬಾರಿ ಆಟಗಾರರಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

77 ಆಟಗಾರರ ಅಗತ್ಯ

10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿಯಿದ್ದು, ಹರಾಜಿನ ಮೂಲಕ ಇದು ಭರ್ತಿಯಾಗಬೇಕಿದೆ. ಉಳಿಕೆ, ವ್ಯಾಪಾರ ಮತ್ತು ಹರಾಜು… ಈ ಪ್ರಕ್ರಿಯೆ ಮೂಲಕ ಪ್ರತೀ ಫ್ರಾಂಚೈಸಿಯೂ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ.

ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಭಾರತದ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್ ಅವರನ್ನು ಕೆಕೆಆರ್, ‘ರೈಟ್‌ ಟು ಮ್ಯಾಚ್‌’ ಮೂಲಕ 23.75 ಕೋಟಿ ರೂ.ಗೆ ಮತ್ತೆ ತಂಡಕ್ಕೆ ತಂದುಕೊಂಡಿತ್ತು. ಈ ಬಾರಿ ಮತ್ತೆಅಯ್ಯರ್ ಹರಾಜು ಕಣದಲ್ಲಿದ್ದಾರೆ. ಲಕ್ನೋದಿಂದ ಬಿಡುಗಡೆಗೊಂಡಿರುವ ಸ್ಪಿನ್ನರ್‌ ರವಿ ಬಿಷ್ಣೋಯಿ ಕೂಡ ಹರಾಜು ಪಟ್ಟಿಯಲ್ಲಿದ್ದು, ಇಬ್ಬರೂ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಯಿದೆ. ಕಳೆದ ಬಾರಿ ಗಾಯದ ಕಾರಣ ಹರಾಜಿನಲ್ಲಿ ಪಾಲ್ಗೊಂಡಿರದ ಕ್ಯಾಮರಾನ್‌ ಗ್ರೀನ್‌ ಈ ಬಾರಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ನಿರೀಕ್ಷೆ ಇದೆ.

ವಿದೇಶಿಯರೇ ಅಧಿಕ

ಹರಾಜು ಪಟ್ಟಿಯಲ್ಲಿ ಗರಿಷ್ಠ ಮೂಲಬೆಲೆ 2 ಕೋಟಿ ರೂ. ಯಾದಿಯಲ್ಲಿ ಒಟ್ಟು 45 ಮಂದಿಯಿದ್ದಾರೆ. ಇದರಲ್ಲಿ ಅಯ್ಯರ್ ಮತ್ತು ಬಿಷ್ಣೋಯಿ ಮಾತ್ರ ಭಾರತೀಯರು. ಇನ್ನು ಗ್ರೀನ್, ಸ್ಟೀವ್‌ ಸ್ಮಿತ್‌, ಲಿವಿಂಗ್‌ಸ್ಟೋನ್‌, ಮಿಚೆಲ್‌, ಮಿಲ್ಲರ್‌ ಸೇರಿ 43 ಮಂದಿ ವಿದೇಶಿ ಆಟಗಾರರಾಗಿದ್ದಾರೆ.

ಕೋಲ್ಕತಾ ಬಳಿ ಹೆಚ್ಚು ಹಣ

3 ಬಾರಿಯ ಚಾಂಪಿಯನ್ಸ್‌ ಕೆಕೆಆರ್ ಬಳಿಕ ಗರಿಷ್ಠ 64.3 ಕೋಟಿ ರೂ. ಹಣವಿದೆ. 6 ಬಾರಿಯ ಚಾಂಪಿಯನ್ ಚೆನ್ನೈ 43.4 ಕೋಟಿ ರೂ. ಹೊಂದಿದೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!