ಮಹಿಳಾ ಹಾಕಿ: ಭಾರತಕ್ಕೆ ಮಣಿದ ವೇಲ್ಸ್

Picture of Savistara

Savistara

Bureau Report

ಸ್ಯಾಂಟಿಯಾಗೊ (ಚಿಲಿ): ಎಫ್‌ಐಎಚ್‌ ಜೂನಿಯರ್ ಮಹಿಳಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿರುವ ಭಾರತ ತಂಡವು ಒಂಬತ್ತನೇ ಸ್ಥಾನದ ಹುಡುಕಾಟದಲ್ಲಿದ್ದು, ಭಾನುವಾರ ನಡೆದ ಪಂದ್ಯದಲ್ಲಿ 3-1ರಿಂದ ವೇಲ್ಸ್ ವಿರುದ್ದ ಜಯ ಸಾಧಿಸಿದೆ.

ಭಾರತ ಪರ ಹಿನಾ ಬಾನೊ (14ನೇ ನಿಮಿಷ), ಸುನೆಲಿಟಾ ಟೊಪ್ರೊ (24ನೇ), ಮತ್ತು ಇಶಿಕಾ (31ನೇ) ಗೋಲು ದಾಖಲಿಸಿದರೆ, ವೇಲ್ಸ್ ಪರ ಎಲೋಯಿಸ್ ಮೋಟ್ (52ನೇ) ಏಕೈಕ ಗೋಲು ಗಳಿಸಿದರು. ಭಾರತ ತಂಡವು ಸಿ ಗುಂಪಿನಲ್ಲಿ ಎರಡು ಜಯ ಮತ್ತು ಒಂದು ಸೋಲಿನೊಂದಿಗೆ ಎರಡನೇ ಸ್ಥಾನ ಗಳಿಸಿ ನಾಕೌಟ್ ರೇಸ್‌ನಿಂದ ಹೊರಬಿದ್ದಿದೆ.ಆರು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಆರು ತಂಡಗಳು ಮತ್ತು ಎರಡನೇ ಸ್ಥಾನ ಪಡೆದು, ಅತ್ಯುತ್ತಮ ಪಾಯಿಂಟ್ಸ್ ಹೊಂದಿರುವ ಎರಡು ತಂಡಗಳು ಕ್ವಾರ್ಟ‌್ರಫೈನಲ್ ಪ್ರವೇಶಿಸಲಿವೆ.ಭಾರತ ತಂಡವು ಮಂಗಳವಾರ ಉರುಗೈ ವಿರುದ್ಧ ಸೆಣಸಲಿದೆ. ಈ ಪಂದ್ಯದ ವಿಜೇತರು ಒಂಬತ್ತನೇ ಸ್ಥಾನಕ್ಕಾಗಿ ಹಣಾಹಣಿ ನಡೆಸಲಿದ್ದಾರೆ. ಸೋತ ತಂಡವು 11ನೇ ಸ್ಥಾನಕ್ಕಾಗಿ ಹೋರಾಟ ನಡೆಸಲಿದೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!